ಮುಡಿಪು: ಸೂರಜ್‌ ಶಿಕ್ಷಣ ಸಂಸ್ಥೆಗಳ 15ನೇ ವಾರ್ಷಿಕೋತ್ಸವ ಇಂದು

Upayuktha
0



ಮಂಗಳೂರು: ಮುಡಿಪುವಿನಲ್ಲಿರುವ ಸೂರಜ್‌ ಶಿಕ್ಷಣ ಸಂಸ್ಥೆಗಳ 15ನೇ ವಾರ್ಷಿಕೋತ್ಸವ ಸಮಾರಂಭ ಇಂದು ಅಪರಾಹ್ನ 2:30ರಿಂದ ನಡೆಯಲಿದೆ.


ಮುಖ್ಯ ಅತಿಥಿಗಳಾಗಿ ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ, ನರಿಂಗಾನದ ಸೇಂಟ್‌ ಲಾರೆನ್ಸ್‌ ಚರ್ಚ್‌ನ ಧರ್ಮಗುರು ರೆವರೆಂಡ್‌ ಫಾದರ್‌ ಫ್ರೆಡ್ರಿಕ್‌ ಕೋರಿ, ಸಾಂಬಾರ್‌ತೋಟ ನೂರಾನಿಯಾ ಜುಮಾ ಮಸೀದಿಯ ಮುದರ್ರಿಸ್‌ ಅಹ್ಸಾನಿ ವಾಮಂಜೂರು,  ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಾಧವ ಎಂ.ಕೆ ಅವರು ಭಾಗವಹಿಸಲಿದ್ದಾರೆ.


ಸೂರಜ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮಂಜುನಾಥ್‌ ಎಸ್‌ ರೇವಣಕರ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.


ಪ್ರಾಂಶುಪಾಲ ಪ್ರೊ. ಜಯರಾಮ ಪೂಂಜಾ, ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಹೇಮಲತಾ ಆರ್‌. ರೇವಣಕರ್‌, ಉಪ ಪ್ರಾಂಶುಪಾಲ ಎ.ಆರ್‌. ಡೋಲ್ಫಿ ಸಿಕ್ವೇರಿಯಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸ್ಟೀಫನ್‌ ಪ್ರಕಾಶ್‌ ವೇಗಸ್‌ ಉಪಸ್ಥಿತರಿರುತ್ತಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

إرسال تعليق

0 تعليقات
إرسال تعليق (0)
To Top