ಗೋವಾದಲ್ಲಿ ವಿದ್ಯುತ್ ಕೊರತೆ ನೀಗಲಿದೆ : ಸಚಿವ ಸುದಿನ್ ಧವಲಿಕರ್

Upayuktha
0

ಪಣಜಿ: ಗೋವಾ ರಾಜ್ಯದಲ್ಲಿನ ಖನಿಜ ಗಣಿಗಳ ಕಂದಕಗಳಲ್ಲಿ ಸಂಗ್ರಹವಾಗಿರುವ ನೀರನ್ನು ಮರುಬಳಕೆ ಮಾಡುವ ಮೂಲಕ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲಿದೆ. ಈ ಯೋಜನೆಯಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆ ನೀಗಲಿದೆ ಎಂದು ಸಚಿವ ಸುದಿನ್ ಧವಳಿಕರ್ ಹೇಳಿದ್ದಾರೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಗೋವಾದಲ್ಲಿ ಸಾಕಷ್ಟು ವಿದ್ಯುತ್ ಪೂರೈಕೆ ಇದೆ ಮತ್ತು ಅದನ್ನು ನಿರಂತರವಾಗಿ ಸುಧಾರಿಸಲಾಗುತ್ತಿದೆ ಎಂದು ಧವಲೀಕರ್ ಭರವಸೆ ನೀಡಿದರು.


ಗೋವಾದ ಶಿರೋಡ ಕ್ಷೇತ್ರದ ಭೂಗತ ವಿದ್ಯುತ್ ಮಾರ್ಗಗಳ (ವಿದ್ಯುತ್ ಕೇಬಲ್) ಕಾಮಗಾರಿಯನ್ನು ಬೇತೋಡದಿಂದ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಸುದಿನ್ ಧವಲಿಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್, ಸ್ಥಳೀಯ ಪಂಚಾಯತ ಅಧ್ಯಕ್ಷರು, ಪಂಚಾಯತ್ ಸದಸ್ಯರು ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


ಸಚಿವ ಧವಳೀಕರ್ ಮಾತನಾಡಿ, ಗಣಿ ನೀರಿನ ಮೂಲಕ ವಿದ್ಯುತ್ ಉತ್ಪಾದನಾ ಯೋಜನೆಗೆ ಕೇಂದ್ರ ಸರ್ಕಾರವೂ ಹಸಿರು ನಿಶಾನೆ ತೋರಿದೆ. ರಾಜ್ಯದಲ್ಲಿ ವಿದ್ಯುತ್ ಇಲಾಖೆಯ ಪ್ರಗತಿ ತೃಪ್ತಿಕರವಾಗಿದ್ದು, ಕಳೆದ ಆರು ತಿಂಗಳಲ್ಲಿ ಶೇ.40ರಷ್ಟು ಆದಾಯ ಹೆಚ್ಚಾಗಿದೆ. ಗ್ರಾಹಕರಿಗೆ ವಿದ್ಯುತ್ ಸರಬರಾಜಿನ ನಿರಂತರತೆಯನ್ನು ಕಾಯ್ದುಕೊಳ್ಳುವುದರೊಂದಿಗೆ ಕೈಗಾರಿಕಾ ಸಂಸ್ಥೆಗಳಿಗೂ ಸಾಕಷ್ಟು ಪೂರೈಸಲಾಗುತ್ತಿದೆ. ಕೇಂದ್ರದ ಮೂಲಕ ಸೌರಶಕ್ತಿಗೆ ಪ್ರಯತ್ನಗಳು ನಡೆಯುತ್ತಿದ್ದು, ಕೈಗಾರಿಕಾ ವಸಾಹತು ವಲಯದಲ್ಲಿ ವಿವಿಧ ಯೋಜನೆಗಳಿಗೂ ಒತ್ತಾಯಿಸಲಾಗುತ್ತಿದೆ. ಇದರಿಂದ ವಿದ್ಯುತ್ ಇಲಾಖೆಗೆ ಬಿಗ್ ರಿಲೀಫ್ ಸಿಕ್ಕಿದೆ ಎಂದು ಧವಲೀಕರ್ ಹೇಳಿದರು.


ಸಚಿವ ಸುಭಾಷ ಶಿರೋಡಕರ್ ಮಾತನಾಡಿ- ಬೇತೋಡ ಸೇರಿ ಇತರೆಡೆ ವಿದ್ಯುತ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 40 ಕೋಟಿ ಕಾಮಗಾರಿ ನಡೆಯಲಿದೆ. ಶಿರೋಡ ಕ್ಷೇತ್ರಕ್ಕೆ 24 ಗಂಟೆ ನೀರು ಹರಿಸಲು ಶ್ರಮಿಸಲಾಗುತ್ತಿದೆ. ತಮ್ಮ ಇಲಾಖೆಯ ಮೂಲಕ ರಾಜ್ಯದ ಜನತೆಗೆ ಒಳ್ಳೆಯದನ್ನು ನೀಡಲು ನಿರಂತರವಾಗಿ ಪ್ರಯತ್ನಿಸುತ್ತೇನೆ ಎಂದು ಸಚಿವ ಸುಭಾಷ್ ಶಿರೋಡ್ಕರ್ ಭರವಸೆ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top