ಪುತ್ತೂರು: ಯಾವುದೇ ಸವಾಲು, ಸಮಸ್ಯೆ ಎದುರಾದರೂ ಮನಸ್ಸಿನಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು ಗುರಿಯೊಂದಿಗೆ ಶ್ರಮವಹಿಸಿ ಮುಂದುವರಿದಾಗ ನಾವು ನಮ್ಮ ಗುರಿಯನ್ನು ತಲುಪಲು ಸಾಧ್ಯ. ಸಾಧನೆಯ ಹಾದಿಯಲ್ಲಿ ಹಲವಾರು ಸೋಲುಗಳು ಬಂದರೂ ಕಂಗೆಡದೆ ಮುಂದುವರಿದಾಗ ಯಶಸ್ಸು ಲಭಿಸುತ್ತದೆ ಎಂದು ಎಸ್.ಜಿ. ಕಾರ್ಪೋರೇಟ್ಸ್ ಆಡಳಿತ ನಿರ್ದೇಶಕ ಸತ್ಯಶಂಕರ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿರುವ ಲಲಿತಾಂಬಿಕಾ ವೇದಿಕೆಯಲ್ಲಿ 21ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಸನ್ಮಾನ ಮಾಡಿ ಮಾತನಾಡಿದರು.
ಯಾವುದೇ ವ್ಯಕ್ತಿ ಉನ್ನತ ಮಟ್ಟಕ್ಕೇರುವ ಮೊದಲು ಆತ ಹಲವು ವಿಚಾರಗಳನ್ನು ಅರಿತಿರುತ್ತಾನೆ. ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಮಟ್ಟಕ್ಕೆ ತಲುಪುವ ಸಂದರ್ಭದಲ್ಲಿ ಯಾವುದೇ ರೀತಿಯ ಅಡೆತಡೆಗಳು ಎದುರಾದರೂ ತಪಸ್ಸಿನಂತೆ ನಿರಂತರವಾಗಿ ಸಾಧನೆಯತ್ತ ಹೆಜ್ಜೆ ಇಡಬೇಕು ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದ ಸಾಧಕ ಎ.ಸುಂದರ ಭಟ್ ಕಾಂಚನ, ವೈದ್ಯಕೀಯ ದೇಶ ಸೇವೆ ಹಾಗೂ ಸಮಾಜ ಸೇವೆ ಸುಬ್ರಹ್ಮಣ್ಯ ಕೆಮ್ಮಿಂಜೆ, ಸಮಾಜ ಸೇವೆ ಶಿವಾನಂದ್ ರಾವ್ ನಟ್ಟೋಜ, ಉದ್ಯಮ ಬಲರಾಮ ಆಚಾರ್ಯ, ಸಾಹಿತ್ಯ, ನಾಟಕ ರಂಗಭೂಮಿ ಯು. ತಿಮ್ಮಪ್ಪ ಪುತ್ತೂರು, ಸಂಗೀತ-ವಾದ್ಯ ಪಿ. ಕೆ.ಗಣೇಶ್, ಸ್ವಚ್ಛತಾ ಕಾರ್ಮಿಕರ ಮುಖ್ಯಸ್ಥ ಅಣ್ಣಪ್ಪ ಕಾರೆಕಾಡು, ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯರ£ ಸನ್ಮಾನಿಸಲಾಯಿತು. 2021ನೇ ಸಾಲಿನ ಜಿಲ್ಲಾ ಪ್ರಶಸ್ತಿ ಪುರಸ್ಕøತ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಗೀತಾಮಣಿ, ಗೋಳಿತೊಟ್ಟು ಶೀನಪ್ಪ ನಾಯ್ಕ, ಚೆನ್ನವರ ಶಾಂತಾ ಕುಮಾರಿ, 2021-22ನೇ ಸಾಲಿನ ಪ್ರಶಸ್ತಿ ಪುರಸ್ಕøತ ಸರ್ವೆ ಜಯರಾಮ ಶೆಟ್ಟಿ, ಪಾಪೆ ಮಜಲು ಥೆರೇಜ್ ಎಂ.ಸಿಕ್ವೇರಾ, ಮೀನಾಡಿ ಗೋವಿಂದ ನಾಯ್ಕ ಅವರನ್ನು ಗೌರವಿಸಲಾಯಿತು.
ಜೇನುಕೃಷಿಯಲ್ಲಿ ಸಾಧನೆಗೈದ ಮನಮೋಹನ್, ಸೃಜನಶೀಲ ಬೋಧನೆಗೆ ಉಪನ್ಯಾಸಕ ಹರೀಶ್ ಶಾಸ್ತ್ರಿ ವರನ್ನು ಸನ್ಮಾನಿಸಲಾಯಿತು.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ.ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕೃಷ್ಣಪ್ರಿಯ.ಕೆ.ಎಸ್. ಹಾಗೂ ಹಸ್ತಿಕ್.ಕೆ ಅವರನ್ನು ಗೌರವಿಸಲಾಯಿತು. ಕನ್ನಡ ಸಾಹಿತ್ಯ ಸಮ್ಮೇಳನದ ವತಿಯಿಂದ ನಡೆಸಲಾದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸಮ್ಮೇಳನಾಧ್ಯಕ್ಷ ಡಾ.ಶ್ರೀಧರ್ ಹೆಚ್.ಜಿ., ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಸಂಚಾಲಕರಾದ ರಾಜಶ್ರೀ ಎಸ್. ನಟ್ಟೋಜ, ಕ.ಸಾ.ಪ. ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಉಮೇಶ್ ನಾಯಕ್, ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಡಾ.ಹರ್ಷಕುಮಾರ್ ರೈ ಸ್ವಾಗತಿಸಿ, ಶಾಂತ ಪುತ್ತೂರು ವಂದಿಸಿ, ಕುಂಬ್ರ ದುರ್ಗಾಪ್ರಸಾದ್ ರೈ ನಿರೂಪಿಸಿದರು. ಆಶಾ ಬೆಳ್ಳಾರೆ ನಿರ್ವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ