ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ: ನೂತನ ಸಮಿತಿಯ ಪದಗ್ರಹಣ

Upayuktha
0

ಮಂಗಳೂರು: ಭಾರತ ಸ್ವಾತಂತ್ರ್ಯದ ಪ್ರಪ್ರಥಮ ಮಹಿಳಾ ಹೋರಾಟಗಾರ್ತಿ ಉಳ್ಳಾಲ ರಾಣಿ ಅಬ್ಬಕ್ಕನ ಸಾರ್ಥಕ ಸ್ಮರಣೆಗಾಗಿ ಸಮರ್ಪಿತ ಸಂಸ್ಥೆ ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಮಹಾಸಭೆಯಲ್ಲಿ 2022-23 ನೇ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಪದಗ್ರಹಣ ಸಮಾರಂಭ ಇತ್ತೀಚೆಗೆ ನಗರದ ಹೊರವಲಯದ ಕಲ್ಲಾಪು ಬಳಿಯ ಖಾಸಗಿ ಹೋಟೆಲ್ ನಲ್ಲಿ ಜರಗಿತು. ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಪ್ರಮಾಣ ವಚನವನ್ನು ನೆರವೇರಿಸಿದರು.


ಪದಾಧಿಕಾರಿಗಳ ವಿವರ :


ಡಾ. ಹರಿಕೃಷ್ಣ ಪುನರೂರು (ಗೌರವಾಧ್ಯಕ್ಷರು), ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಅಧ್ಯಕ್ಷರು), ರವೀಂದ್ರ ಶೆಟ್ಟಿ ಉಳಿದೊಟ್ಟು (ಪ್ರಧಾನ ಸಂಚಾಲಕರು), ನಮಿತಾ ಶ್ಯಾಮ್,ವಾಮನ್ ಬಿ. ಮೈಂದನ್ (ಉಪಾಧ್ಯಕ್ಷರು), ತ್ಯಾಗಮ್ ಹರೇಕಳ (ಪ್ರಧಾನ ಕಾರ್ಯದರ್ಶಿ), ಪಿ. ಡಿ. ಶೆಟ್ಟಿ (ಕೋಶಾಧಿಕಾರಿ), ಸುಮಾ ಪ್ರಸಾದ್, ದೀಪಕ್ ರಾಜ್ ಉಳ್ಳಾಲ್ (ಜೊತೆ ಕಾರ್ಯದರ್ಶಿಗಳು), ನಿರ್ಮಲ್ ಭಟ್ ಕೊಣಾಜೆ (ಜೊತೆ ಕೋಶಾಧಿಕಾರಿ), ವಿಜಯಲಕ್ಷ್ಮಿ ಬಿ. ಶೆಟ್ಟಿ (ಸಂಚಾಲಕರು), ಸುಹಾಸಿನಿ ಬಬ್ಬುಕಟ್ಟೆ (ಹಿರಿಯ ಸಲಹೆಗಾರರು), ಲಕ್ಷ್ಮೀನಾರಾಯಣ ರೈ ಹರೇಕಳ, ಸತೀಶ್ ಸುರತ್ಕಲ್ (ಸಾಂಸ್ಕೃತಿಕ ಕಾರ್ಯದರ್ಶಿಗಳು), ತೋನ್ಸೆ ಪುಷ್ಕಳ ಕುಮಾರ್,ವಿಜಯಲಕ್ಷ್ಮಿ ಕಟೀಲು (ಸಂಘಟನಾ ಕಾರ್ಯದರ್ಶಿಗಳು), ತುಕಾರಾಂ ಉಳ್ಳಾಲ್, ಲೋಕನಾಥ ರೈ (ಕ್ರೀಡಾ ಕಾರ್ಯದರ್ಶಿಗಳು), ಪ್ರಕಾಶ್ ಸಿಂಪೋನಿ, ಮೋಹನ್ ದಾಸ್ ರೈ, ಡಾ. ಅರುಣ್ ಉಳ್ಳಾಲ್ (ಯೋಜನಾ ನಿರ್ದೇಶಕರು).


ಕಾರ್ಯಕಾರಣಿ ಸಮಿತಿ ಸದಸ್ಯರುಗಳಾಗಿ ಚಂದ್ರಹಾಸ ಅಡ್ಯಂತಾಯ, ಕೆ.ತಾರಾನಾಥ ರೈ, ಎಂ.ಸುಂದರ್ ಶೆಟ್ಟಿ,ಲೋಹಿತ್ ಕುಮಾರ್ ಪಜೀರು, ಬಾದಶಾ ಸಾಂಬಾರ್ ತೋಟ, ಗೀತಾ ಜುಡಿತ್ ಸಲ್ದಾನ್ಹ, ಪ್ರತಿಮಾ ಹೆಬ್ಬಾರ್, ವಿನುತಾ, ಸುಮತಿ ಹೆಗ್ಡೆ, ಆನಂದ ಶೆಟ್ಟಿ, ಪ್ರಭಾಕರ ರೈ, ಅರುಂಧತಿ, ಜಯಲಕ್ಷ್ಮಿ, ಎ.ಕೆ ಬಾಬು, ವಸಂತ್ ರೈ ಪ್ರಮಾಣವಚನ ಸ್ವೀಕರಿಸಿದರು.


ಅಬ್ಬಕ್ಕ ಜಾಗೃತಿ ಕಾರ್ಯಕ್ರಮ:


ಪದಗ್ರಹಣದ ಬಳಿಕ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು 'ಪ್ರತಿಷ್ಠಾನದ ವತಿಯಿಂದ ಮೂರು ತಿಂಗಳಿಗೊಮ್ಮೆ ವಿವಿಧ ಕಡೆಗಳಲ್ಲಿ ರಾಣಿ ಅಬ್ಬಕ್ಕ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುವುದು; ಅಲ್ಲದೆ ನಮ್ಮ ಅಬ್ಬಕ್ಕ ವಾರ್ಷಿಕ ಸಮಾರಂಭದಲ್ಲಿ ಸಾಧಕರನ್ನು ಗುರುತಿಸಿ ಅಬ್ಬಕ್ಕ ಸೇವಾ ಪ್ರಶಸ್ತಿ ನೀಡಲಾಗುವುದು' ಎಂದರು.


ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾರ್ಥಿಸಿದರು ಸಾಂಸ್ಕೃತಿಕ ಕಾರ್ಯದರ್ಶಿ, ಲಕ್ಷ್ಮೀನಾರಾಯಣ ರೈ ಹರೇಕಳ ಸ್ವಾಗತಿಸಿದರು. ಉಪಾಧ್ಯಕ್ಷೆ ನಮಿತಾ ಶ್ಯಾಂ ವಂದಿಸಿದರು. ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top