ಅ. 10ರಂದು ಕಾರಂತರ ಕುರಿತು ಅಂತರ್ ಕಾಲೇಜು ಭಾಷಣ ಸ್ಪರ್ಧೆ

Upayuktha
0

                                                                   

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಕೆ ಶಿವರಾಮ ಕಾರಂತ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಡಾ. ಕೆ ಶಿವರಾಮ ಕಾರಂತರ ಜನ್ಮದಿನಾಚರಣೆಯ ಪ್ರಯುಕ್ತ ಪದವಿ ವಿದ್ಯಾರ್ಥಿಗಳಿಗಾಗಿ ಅಂತರ್ ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯನ್ನು ಅಕ್ಟೋಬರ್ 10 ರಂದು ಸಂಜೆ 5 ಕ್ಕೆ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.  

ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ “ಶಿವರಾಮ ಕಾರಂತರ ಕೃತಿಗಳಲ್ಲಿ ಪ್ರಾದೇಶಿಕ ಸಂಸ್ಕೃತಿ” (ಶಿವರಾಮ ಕಾರಂತರ ಯಾವುದಾದರೂ ಒಂದು ಕೃತಿಯನ್ನು ಆಧರಿಸಿ) ಎಂಬ ವಿಷಯವನ್ನು ಆಧರಿಸಿ ನಿಗದಿಪಡಿಸಿದ ಸಮಯದೊಳಗೆ (4+1 ನಿಮಿಷಗಳು) ಸ್ಪರ್ಧಿಗಳು ವಿಷಯ ಮಂಡನೆ ಮಾಡಬಹುದಾಗಿದೆ. 

ಈ ಸ್ಪರ್ಧೆಯು ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿರುವ ಎಲ್ಲಾ ಸಂಯೋಜಿತ ಘಟಕ ಹಾಗೂ ಸ್ವಾಯತ್ತ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಮೀಸಲಾಗಿದ್ದು ಆಸಕ್ತರು ತಮ್ಮ ಪೂರ್ಣ ಹೆಸರು, ವಿಳಾಸ ಹಾಗೂ ಇ-ಮೇಲ್ ಐಡಿಗಳನ್ನು ಅಕ್ಟೋಬರ್ 09 ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡುವಂತೆ ವಿನಂತಿಸಲಾಗಿದೆ.

 ಇಮೇಲ್ ಐಡಿ- uecm2015@gmail.com ಮತ್ತು ಹೆಚ್ಪಿನ ಮಾಹಿತಿಗೆ  ದೂರವಾಣಿ  ಸಂಖ್ಯೆ:  9902760145/9449333919 ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top