ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆ ಅಂಬಿಕಾ ವಿದ್ಯಾಲಯದ ಮೂವರು ತೇರ್ಗಡೆ

Chandrashekhara Kulamarva
0

                

 
   

ಪುತ್ತೂರು: ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್‌, ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಮೂಡಬಿದಿರೆಯಲ್ಲಿ ನಡೆಸಿದ 2021-22 ನೇ ಸಾಲಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ನಗರದ ನಟ್ಟೋಜ ಫೌಂಡೇಶನ್‌ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಯ ಮೂವರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 

ಸ್ಕೌಟ್ಸ್ ವಿಭಾಗದಲ್ಲಿ ಪುತ್ತೂರಿನ ಕಲ್ಪವೃಕ್ಷ ಆರ್ಗನಿಕ್ಸ್ ಮಾಲಕ ಸೂರಪ್ಪ ಗೌಡ ಹಾಗೂ ಹರಿಣಾಕ್ಷಿಯವರ ಪುತ್ರ ಸ್ವಸ್ತಿಕ್‌ ಎ ಎಸ್, ಕಲ್ಲರ್ಪೆಯ ಪಾಪ್ಯುಲರ್‌ ಸ್ವೀಟ್ಸ್‌ನ ಉದ್ಯೋಗಿ ಸತೀಶ್‌ ಬಿ ಹಾಗೂ ಜಯಶ್ರೀ  ಪುತ್ರ ಮನ್ವಿತ್‌ ಎಸ್‌ ಹಾಗೂ ಗೈಡ್ಸ್ ವಿಭಾಗದಲ್ಲಿ  ಬಾಳಿಲ ವಿದ್ಯಾಬೋಧಿನಿ  ಪ್ರೌಢಶಾಲೆಯ ಸಹ ಶಿಕ್ಷಕ ಉದಯ ಕುಮಾರ್‌ ರೈ ಎಸ್‌ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂಬ್ರ ಉಪನ್ಯಾಸಕಿ ದಿವ್ಯಾ ಆಳ್ವ ಎಸ್‌ ಆರ್‌ ಅವರ ಪುತ್ರಿ ಪ್ರಾರ್ಥನಾ ರಾಜ್ಯ ಪುರಸ್ಕಾರ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ.  ಈ ವಿದ್ಯಾರ್ಥಿಗಳಿಗೆ ವಿದ್ಯಾಲಯದ ಸ್ಕೌಟ್‌ ಮಾಸ್ಟರ್‌ ಸತೀಶ್‌ ಇರ್ದೆ ಹಾಗೂ ಗೈಡ್ಸ್ ಶಿಕ್ಷಕಿ ಚಂದ್ರಕಲಾ ಮಾರ್ಗದರ್ಶನ ಹಾಗೂ ತರಬೇತಿಯನ್ನು ನೀಡಿದ್ದರು.



إرسال تعليق

0 تعليقات
إرسال تعليق (0)
To Top