ಉಡುಪಿ: ಉಪ್ಪೂರಿನಲ್ಲಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಇತ್ತೀಚೆಗೆ ಜರುಗಿತು. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಗೋಪಾಲಕೃಷ್ಣ ಎಂ ಗಾಂವ್ಕರ್ ಮಾತನಾಡಿ, ಮುಂಬರುವ ದಿನಗಳಲ್ಲಿ ಹೊಸ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ, ಎನ್ ಎಸ್ ಎಸ್ ಗೆ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಬರಲಿದೆ ಎಂದು ಅಭಿಪ್ರಾಯಪಟ್ಟರು.
ಸರಕಾರಿ ಪ್ರೌಢಶಾಲೆ ಶಿಬಿರಾಧಿಕಾರಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಗಿರಿಜಾ ಹೆಗಡೆಯವರು ಮಾತನಾಡಿ, ಶಿಬಿರದ ಪ್ರಾಮುಖ್ಯತೆ ಮತ್ತು ದಾನಿಗಳ ಕೊಡುಗೆಯನ್ನು ಸ್ಮರಿಸಿದರು. ಶಿಕ್ಷಣ ಸೇವಾ ಸಮಿತಿಯ ಅದ್ಯಕ್ಷರಾದ ಶ್ರೀಮತಿ ಲತಾ ರಾವ್, ಖಜಾಂಜಿ ಶ್ರೀ ಜಯೇಶ್ ಕಾಮತ್, ಸದಸ್ಯೆ ಶ್ರೀಮತಿ ಸುಚೇತಾ, ಕಲ್ಯಾಣಪುರ ರೋಟರಿ ಮಾಜಿ ಅಧ್ಯಕ್ಷ ಶ್ರೀ ವಿಜಯ್ ಮಾಯಾಡಿ, ಎನ್ ಎಸ್ ಎಸ್ ನಾಯಕಿ ಕುಮಾರಿ ಪೃಥ್ವಿ ಖಾರ್ವಿವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕಿ, ಶ್ರೀಮತಿ ಸುಧಾ ಹೆಗಡೆ ಮಾಡಿದರು. ಸ್ವಾಗತ, ಪ್ರಸ್ತಾವನೆಯನ್ನು ಉಪನ್ಯಾಸಕ ಶ್ರೀ ಪ್ರಕಾಶ್ ಶೆಟ್ಟಿ ನೆರವೇರಿಸಿದರು. ಶಿಬಿರದ ವರದಿಯನ್ನು ಕುಮಾರಿ ಮಂಜುಳಾ ಓದಿದರು. ಕುಮಾರಿ ವಿಜಯಲಕ್ಷ್ಮಿ ವಿಧ್ಯಾರ್ಥಿನಿಯರ ಬಹುಮಾನ ಕಾರ್ರಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಯೋಗ ಶಿಕ್ಷಕ ಶ್ರಿ ಸಂಜೀವ ಮತ್ತು ಬಾಣಸಿಗರಾದ ಶ್ರೀ ಶ್ರೀ ಮುಖ್ಯಪ್ರಾಣ ಭಟ್ ಇವರನ್ನು ಸನ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ