ಸುಬ್ರಹ್ಮಣ್ಯ ಭಾರತಿ ಅವರ ಕೃತಿಗಳು: ನಾಲ್ಕು ಅನುವಾದಿತ ಪುಸ್ತಕಗಳ ಬಿಡುಗಡೆ

Upayuktha
0

ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಪ್ರಕಟಣೆಗಳು


ಕುಪ್ಪಂ: ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಚೆನ್ನೈನ ಪ್ರೊ.ನ.ಸುಬ್ಬುರೆಡ್ಡಿಯಾರ್ 100 ಎಜುಕೇಷನಲ್ ಟ್ರಸ್ಟ್ ಅವರು ಕೈಗೊಂಡ ಅನುವಾದ ಯೋಜನೆಯ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭವು ಇತ್ತೀಚೆಗೆ ವಿಶ್ವವಿದ್ಯಾಲಯದ ಬೆಳ್ಳಿಹಬ್ಬದ ಸಂದರ್ಭದಲ್ಲಿ ನಡೆಯಿತು.


ತಮಿಳಿನ ಮಹಾಕವಿ ಭಾರತಿಯಾರ್ ಅವರ ಸುಪ್ರಸಿದ್ಧ ಕಾವ್ಯ 'ಕುಯಿಲ್ ಪಾಟ್ಟು'ವಿನ ವಿಮರ್ಶಾ ಕೃತಿಯ ಅನುವಾದ ಇದಾಗಿದ್ದು ವಿವಿಯ ಕುಲಸಚಿವರಾದ ಡಾ.ಎ.ಕೆ.ವೇಣುಗೋಪಾಲ ರೆಡ್ಡಿ, ರೆಕ್ಟರ್ ಡಾ.ಅನುರಾಧ, ವಿದ್ವಾಂಸರಾದ ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾದ ಡಾ.ಅಜಕ್ಕಳ ಗಿರೀಶ ಭಟ್, ತೆಲುಗಿನ ಸಾಹಿತಿ ಪ್ರೊ.ರಾಚಪಾಲೆಂ ಚಂದ್ರಶೇಖರ್, ತಮಿಳುನಾಡಿನ ಪರೀಕ್ಷಾ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಪೊನ್ ಕುಮಾರ್, ಕೇರಳ ಫೋಕ್ ಲೋರ್ ಅಕಾಡೆಮಿಯ ಅಧ್ಯಕ್ಷರಾದ ಶ್ರೀ. ಒ.ಎಸ್.ಉನ್ನಿಕೃಷ್ಣನ್ ಈ ಕೃತಿಗಳನ್ನು ಲೋಕಾರ್ಪಣೆ ಮಾಡಿದರು. 


ಕೃತಿಯನ್ನು ಕನ್ನಡ, ತುಳು, ತೆಲುಗು, ಮಲಯಾಳಂಗಳಿಗೆ ಅನುವಾದಿಸಿರುವ ಡಾ.ಜಯಲಲಿತ, ಡಾ.ಎಂ.ಎಸ್. ದುರ್ಗಾಪ್ರವೀಣ, ಡಾ.ಸಿ.ಇ. ಗಾಯತ್ರಿದೇವಿ, ಡಾ.ಸುಷ್ಮಾ ಶಂಕರ್ ಅವರು ಈ ವೇಳೆ ಉಪಸ್ಥಿತರಿದ್ದರು. ಪ್ರೊ.ನ.ಸುಬ್ಬುರೆಡ್ಡಿಯಾರ್ ಅವರ 'ಕುಯಿಲ್ ಪಾಟ್ಟು: ಒರು ಮದಿಪ್ಪೀಡು' ಎಂಬ ಮೂಲ ಕೃತಿಯು ಭಾರತಿಯಾರ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ1982ರ ವೇಳೆಗೆ ಹೊರಬಂದಿದ್ದು ವಿದ್ವಾಂಸರ ಪ್ರಶಂಸೆಗೆ ಪಾತ್ರವಾಗಿತ್ತು.  ದ್ರಾವಿಡ ಭಾಷಾ ಸಾಹಿತ್ಯಗಳ ತೌಲನಿಕ ಅಧ್ಯಯನಗಳಿಗೆ ಸಹಾಯಕವಾಗಬಲ್ಲ ಈ ನಾಲ್ಕೂ ಅನುವಾದಗಳು ಇದೀಗ Internet Archieves ನಲ್ಲಿ ಉಚಿತವಾಗಿ ಲಭ್ಯವಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top