ಬೆಂಗಳೂರು: ಹನುಮಂತನಗರದ ಶ್ರೀ ಬಾಲಾಜಿ ಪದವಿ ಕಾಲೇಜಿನಲ್ಲಿ ಕವಿ ಡಾ. ಎಸ್. ರಾಮಮೂರ್ತಿ ಶರ್ಮ ಲಕ್ಕೂರು ಅವರ ‘ಸೊಬಗು’ ಕವನ ಸಂಕಲನವನ್ನು ಸಾಹಿತಿ ಡಾ. ಎಸ್.ಹೆಚ್. ಭುವನೇಶ್ವರ್ ಲೋಕಾರ್ಪಣೆಗೊಳಿಸಿ ಮಾತನಾಡುತ್ತ ಸಾಹಿತಿಗಳಲ್ಲಿ ಪ್ರತಿಭೆ – ಪಾಂಡಿತ್ಯವಿರುತ್ತದೆ ಅದನ್ನು ಪ್ರೋತ್ಸಾಹಿಸುವ ಗುಣವನ್ನು ಸಹೃದಯರು ಮಾಡಿದಾಗ ಅವರು ಇನ್ನು ಹೆಚ್ಚಿನ ಸಾಹಿತ್ಯ ಕೃಷಿ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಂಕರ ಚರಿತಂ ಮೂಲಕ ಆದಿ ಶಂಕರರ ಜೀವನಗಾಥೆಯನ್ನು ಸಂಕ್ಷಿಪ್ತವಾಗಿ ಹಾಗು ಬೇಲೂರಿನ ಶಿಲ್ಪಕಲಾ ಸೊಬಗಿನ ವರ್ಣನೆಯನ್ನು ಖಂಡಕಾವ್ಯದ ರೂಪದಲ್ಲಿ ಬರೆದು ಲೌಕಿಕ ಮತ್ತು ಆಧ್ಯಾತ್ಮಿಕ ಎರಡು ಪ್ರಕಾರಗಳಲ್ಲೂ ತಮ್ಮ ವಿಶಿಷ್ಟವಾದ ಛಾಪನ್ನು ರೂಢಿಸಿಕೊಂಡಿದ್ದಾರೆ. ಸರಳತೆ ಮತ್ತು ಸೌಂದರ್ಯದಿಂದ ಮೆರೆಯುವ ಪುಷ್ಟ ಸಂಕುಲದಂತೆ ಈ ಕವನ ಸಂಕಲನದಲ್ಲಿ ಗೋಚರಿಸುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಡಾ.ಆರ್.ವಾದಿರಾಜು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕಿ ಡಾ. ಎಚ್.ಎ. ಸತ್ಯವತಿ ಕವನ ಸಂಕಲನದ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಕಾಲೇಜಿನ ಪ್ರಾಂಶುಪಾಲ ಪ್ರೋ. ಉಮೇಶ್ ದಕ್ಷಿಣಾಮೂರ್ತಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ