ಮಂಗಳೂರು: ಸ್ಮಾರ್ಟ್ ಸಿಟಿ ವತಿಯಿಂದ ಅ.18ರ ಬೆಳಿಗ್ಗೆ 10 ಗಂಟೆಗೆ ಲೋಕಸಭಾ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರ ಉಪಸ್ಥಿತಿಯಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯಲಿವೆ.
ವಿವರ ಹೀಗಿದೆ:
ಪಂಪ್‍ವೆಲ್ ಮಹಾವೀರ ವೃತ್ತ ಅಭಿವೃಧ್ಧಿ ಕಾಮಗಾರಿ, ಎ.ಬಿ ಶೆಟ್ಟಿ ವೃತ್ತ ಅಭಿವೃಧ್ಧಿ ಕಾಮಗಾರಿ, ಶಿವನಗರ ಬ್ರಿಡ್ಜ್ ಅಭಿವೃಧ್ಧಿ ಕಾಮಗಾರಿ, ಎಮ್ಮೆಕೆರೆ ರಸ್ತೆ ಅಭಿವೃಧ್ಧಿ ಕಾಮಗಾರಿ, ಟಿ.ವಿ ರಮಣ ಪೈ ಹಾಲ್ ರಸ್ತೆ ಅಭಿವೃಧ್ಧಿ ಹಾಗೂ ಒಳಚರಂಡಿ ಕಾಮಗಾರಿ ಶಿಲಾನ್ಯಾಸ ನೆರವೇರಲಿದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ (ತಾಂತ್ರಿಕ) ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ