ಕೆಂಪಮ್ಮ ಪುರಸ್ಕಾರಕ್ಕೆ ಶಾಂತಾ ಪುತ್ತೂರು ಆಯ್ಕೆ

Upayuktha
0

ಮೈಸೂರು: ಅ.20ರಂದು ಮೈಸೂರಿನ ಕಲಾಮಂದಿರದ ಕಿರುಮಂದಿರದಲ್ಲಿ ನಗೆಹಬ್ಬ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಾಗೃತಿ ಟ್ರಸ್ಟ್ (ರಿ) ಸಂಸ್ಥೆಯು ನಾಗೇಶ್ ಬಿ ಸಾರಥ್ಯದಲ್ಲಿ ಕೊಡಮಾಡುವ ಕೆಂಪಮ್ಮ ಪುರಸ್ಕಾರಕ್ಕೆ ಶಾಂತಾ ಪುತ್ತೂರು ಆಯ್ಕೆಗೊಂಡಿದ್ದಾರೆ.


ಇವರು ಓರ್ವ ಮಹಿಳಾ ಸಾಹಿತಿ. ಹಲವಾರು ಕವಿಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದ್ದಾರೆ. ಅದೇ ರೀತಿ ಅನೇಕ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಬಾಚಿದ್ದಾರೆ. ಶಿಕ್ಷಣ ಮತ್ತು ಸಾಹಿತ್ಯ ಸೇವೆಗೆ ಯುಗಪುರುಷ ಕಿನ್ನಿಗೋಳಿ ಹಾಗೂ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಯುಗಪುರುಷ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.


ಶಾಂತಾ ಪುತ್ತೂರು, ಸರಕಾರಿ ಪದವಿ ಪೂರ್ವ ಕಾಲೇಜು ಕಬಕ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ನಾತಕೋತ್ತರ ಪದವೀಧರರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷೆ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ, ಇವರ 'ಸೌರಭ' ಕವನ ಸಂಕಲನ ಬಿಡುಗಡೆಗೊಂಡಿದೆ. ರಾಜ್ಯಮಟ್ಟದ ಯೋಗ ಸಂಪನ್ಮೂಲ ವ್ಯಕ್ತಿ ಮತ್ತು ರಾಜ್ಯ ಮಟ್ಟದ ಯೋಗಾಸನ ತೀರ್ಪಗಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಗೈಡ್ಸ್ ಲಾಂಗ್ ಸರ್ವಿಸ್ ಅವಾರ್ಡ್, ಒಳಗೊಂಡಂತೆ ಹಲವು ರಾಜ್ಯಪ್ರಶಸ್ತಿಗಳು ಲಭಿಸಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top