ಒಂದು ಕಿರು ವಿಶ್ಲೇಷಣೆ
ಭಾರತೀಯ ಬಹುದೂರ ಮೂಲದ ಹಿಂದೂ ಧಮ೯ದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡ ರಿಷಿ ಸುನಕ್ ಕೇವಲ ಈ ಆಹ೯ತೆಯೊಂದಿಗೆ ಬ್ರಿಟಿಷ್ ರು ಅವರನ್ನು ಪ್ರಧಾನಿ ಮಂತ್ರಿ ಹುದ್ದೆಗೆ ಏರಿಸಿಕೊಂಡಿದ್ದು ಖಂಡಿತವಾಗಿಯೂ ಅಲ್ಲ. ಬದಲಾಗಿ ಈ ಬ್ರಿಟಿಷರಲ್ಲಿ ಒಂದು ವಿಶೇಷ ಗುಣವಿದೆ ಅದೇನೆಂದರೆ ತಮ್ಮ ದೇಶ ಆಪತ್ತಿನಲ್ಲಿಯೊ ವಿಪತ್ತಿನಲ್ಲಿ ಇದೆ ಅಂದಾಗ ತಮ್ಮೊಳಗೆ ಎಲ್ಲಿಯೆಾ ಕೂತಿದ್ದ ಸಮಥ೯ ಹಾಗೂ ದೇಶಕ್ಕೆ ಸ್ಪೂರ್ತಿ ತುಂಬ ಬಲ ಘನ ವ್ಯಕ್ತಿಯನ್ನೇ ಪ್ರಧಾನಿ ಹುದ್ದೆಗೆ ಏರಿಸುವುದುವು ಇದು ಬ್ರಿಟಿಷರ ರಾಜಕೀಯ ಮುತ್ಸದ್ದಿತನ ಅನ್ನುವುದನ್ನು ಅವರ ರಾಜಕೀಯ ಇತಿಹಾಸವೇ ಹೇಳುತ್ತದೆ. ಉದಾ:ಎರಡನೇಯ ಮಹಾ ಯುದ್ಧ ಕಾಲದಲ್ಲಿ ಇಡಿ ಬ್ರಿಟನ್ ಆಥಿ೯ಕವಾಗಿ ರಾಜಕೀಯ ವಾಗಿ ತುಂಬಾ ಅಸ್ಥಿರವಾಗಿ ತೇಲಾಡುವ ಪರಿಸ್ಥಿತಿಯಲ್ಲಿ ಇದ್ದಾಗ ಎಲ್ಲೊ ಬದಿಯಲ್ಲಿ ಕುಾತಿದ್ದ ಅಪ್ರತಿಮ ವಾಗ್ಮಿ ಸ್ಪೂರ್ತಿಯ ಚಿಲುಮೆ ಅನ್ನಿಸಿದ ವಿನ್ಸೆಂಟ್ ಚಚಿ೯ಲ್ ನನ್ನು ಇದೇ ಕನ್ಸರ್ವೇಟಿವ್ ಪಕ್ಷದವರು ಅಂದಿನ ಪ್ರಧಾನಿ ಪಟ್ಟಕ್ಕೆ ಏರಿಸಿದವರು ಇದೇ ಬ್ರಿಟಿಷ್ ರು ಅನ್ನುವುದನ್ನು ಮರೆಯುವಂತಿಲ್ಲ. ವಿನ್ಸೆಂಟ್ ಚಚಿ೯ಲ್ ಸಾಮಥ್ಯ೯ ಎಷ್ಟು ಇತ್ತು ಅಂದರೆ ಮಹಾ ಯುದ್ಧದಿಂದ ದಿವಾಳಿಯಾಗಿದ್ದ ಬ್ರಿಟನನ್ನು ಮೇಲಕ್ಕೆ ಎತ್ತಿದ ಕೀರ್ತಿ ಚಚಿ೯ಲರಿಗೆ ಸಲ್ಲುತ್ತದೆ. ಹಾಗಾಗಿ ಅವರು ಎರಡು ಬಾರಿ ಪ್ರಧಾನ ಮಂತ್ರಿ ಹುದ್ದೆಗೆ ಏರಿದರು.ಹಾಗಾಗಿಯೇ ಅವರನ್ನು ಒಬ್ಬ ಶ್ರೇಷ್ಠ ನಾಯಕ ಅನ್ನುವುದನ್ನು ಬ್ರಿಟಿಷ್ ರು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ.
ಇಂದು ರಿಷಿ ಸುನಕ್ ರವರುಆ ದೇಶದ ಪ್ರಧಾನ ಮಂತ್ರಿ ಹುದ್ದೆಗೆ ಏರುತ್ತಿರುವ ಸಂದರ್ಭ ಕೂಡಾ ರಾಜಕೀಯವಾಗಿ ಆಥಿ೯ಕವಾಗಿ ಬ್ರಿಟಿಷ್ ಜನತೆಗೆ ಒಬ್ಬ ಸಮಥ೯ ನಾಯಕನ ಅಗತ್ಯವಿತ್ತು ಅನ್ನುವುದು ಅಷ್ಟೇ ಸತ್ಯ.ಆದುದರಿಂದಲೇ ಸುನಕ್ ಅವರ ಸಾಮಥ್ಯ೯ ವಾಗ್ಮಿ ತನ ಆಥಿ೯ಕ ಚಿಂತನೆ ಮತ್ತು ಬಹು ಮುಖ್ಯವಾಗಿ ಸುನಕ್ ರವರ ಕ್ರಿಯಾಶೀಲ ವ್ಯಕ್ತಿತ್ವ ಬ್ರಿಟನ್ ಪ್ರಧಾನಿ ಹುದ್ದೆಗೆ ಸೆಳೆದಿದೆ ಅನ್ನುವುದನ್ನು ಭಾರತಿಯವರಾದ ನಾವು ಮನಗಾಣಬೇಕು.
ಇಂದು ಸುನಕ್ ಬ್ರಿಟನ್ ಪ್ರಧಾನಿಯಾಗುತ್ತಿದ್ದಾರೆ ಅಂದ ತಕ್ಷಣವೇ ನಮ್ಮ ನೆಲದಲ್ಲಿ ಇನ್ನೊಂದು ಬಾಲಿಶವಾದ ವಿಷಯ ಚಚೆ೯ಗೆ ಗ್ರಾಸವಾಗಿದೆ. ಭಾರತದಲ್ಲಿ ಕೂಡ ಭಾರತೀಯ ಮೂಲವಲ್ಲದ ವ್ಯಕ್ತಿಯನ್ನು ಈ ದೇಶದ ಪ್ರಧಾನಿ ಆಗುವ ಸಂದರ್ಭದಲ್ಲಿ ನಾವೇಕೆ ಅಪಸ್ವರ ಎತ್ತ ಬೇಕಿತ್ತು ?... ಯಾರೊ ಒಬ್ಬ ಕಣ್ಣಿಗೆ ಕಾಣದ ಅಲ್ಪ ಸಂಖ್ಯಾತನನ್ನು ಈ ದೇಶದ ಪ್ರಧಾನಿ ಹುದ್ದೆಗೆ ಏರಿಸ ಬೇಕು ಅನ್ನುವ ಅಪ್ರಸ್ತುತ ಅಸಂಬದ್ಧ ಚಚೆ೯ಗಳು ನಡೆಯಲು ಶುರುವಾಗಿದೆ.
ರಿಷಿ ಸನಕ್ ನಾವೇನೊ ನಮ್ಮ ನೆಲದ ಅಳಿಯನೆಂದರು ಅವರು ನಮ್ಮ ಮನೆ ತೊಳೆಯಲು ಬ್ರಿಟನ್ ಪ್ರಧಾನಿಯಾಗಿ ಬಂದ ಆಳಿಯನಲ್ಲ ಅದು ಶತ ಸಿದ್ಧದ ಮಾತು. ಅದು ಸಾಧ್ಯವೂ ಅಲ್ಲ ಸಾಧುವೂ ಅಲ್ಲ... ಸುನಕ್ ಇಂಗ್ಲೆಂಡ್ ಮೂಲ ಪೌರತ್ವ ಹೊಂದಿರುವ ಪ್ರಜೆಯೇ ಹೊರತು ನಮ್ಮ ಸೊಸೆಯ ತರಹ ಬಂದ ಅಳಿಯನ್ನಲ್ಲ. ಸಾಮಥ್ಯ೯ದಲ್ಲೂ ಅಷ್ಟೇ ನಮ್ಮ ಸೊಸೆಗೆ ಈ ದೇಶದ ಪರಿ ಜ್ಞಾನವೇ ಇರಲಿಲ್ಲ ಮಾತ್ರವಲ್ಲ ಹಲವು ವರುಷಗಳ ಕಾಲ ಪೌರತ್ವ ಸ್ವೀಕರಿಸಲೂ ಹಿಂದೆ ಮುಂದೆ ನೇೂಡಿದ ಸೊಸೆ ಅನ್ನುವುದನ್ನು ಮತ್ತೆ ನೆನಪಿಸ ಬೇಕಾಗಿದೆ.ಆದರೂ ಭಾರತೀಯ ಕುಟುಂಬದ ಸೊಸೆಯಾಗಿ ಬಂದ ಕಾರಣದಿಂದಲೇ ಒಂದು ರಾಷ್ಟ್ರಿಯ ಪಕ್ಷದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿರುವುದು ಕೂಡ ಆ ಪಕ್ಷದ ಪರಿಸ್ಥಿತಿಯೇ ಕಾರಣವಾಗಿತ್ತು ಅನ್ನುವುದು ಅಷ್ಟೇ ಸತ್ಯ. ಇಂದು ನಾವು ಪ್ರತಿಪಾದಿಸುತ್ತಿರುವಸೊಸೆಗಿರುವ ಒಂದೇ ಆಹ೯ತೆ ಅಂದರೆ ಗಂಡನ ಪೂವ೯ಜರ ಹೆಸರೊಂದೆ ಉಸಿರು. ಆದುದರಿಂದ ಸುನಕ್ ರ ತರಹದಲಿಯೇ ಈ ದೇಶದ ಸೊಸೆಯನ್ನು ಅಧಿಕಾರಕ್ಕೆ ಏರಿಸ ಬೇಕಿತ್ತು ಅನ್ನುವ ಮಾತು ಅತ್ಯಂತ ಅಪ್ರಸ್ತುತ.
ಇನ್ನೂ ಕೆಲವರಿಗೆ ಈಗಅಲ್ಪಸಂಖ್ಯಾತರ ಮೇಲೆ ಏಲ್ಲಿದ ಪ್ರೀತಿ ಉಕ್ಕಿ ಬರಲು ಪ್ರಾರಂಭವಾಗಿದೆ.ಅವರಿಗೆ ದೇಶದ ಭದ್ರತೆ ಉಳಿಯುವು ಮುಖ್ಯ ವಲ್ಲ..ದೇಶವನ್ನು ಕಣ್ಣಿಗೆ ಕಾಣದ ವ್ಯಕ್ತಿಗಳಿಗೆ ಮಾರಿ ತಾವು ಸುಖ ನಿದ್ರೆ ಮಾಡಬೇಕು ಅನ್ನುವ ಹಂಬಲ. ಅಂದರೆ ಇಂದಿನ ನಮ್ಮ ಪ್ರಧಾನಿ ಮುಂದುವರಿದರೆ ಅವರಿಗೆ ಸುಖನಿದ್ರೆ ಖಂಡಿತವಾಗಿ ಇಲ್ಲ ಹಾಗಾಗಿ ಇಂತಹದೊಂದು ಮಿಥ್ಯಾ ಜಾತ್ಯತೀತ (sudo secularism) ಮಂತ್ರ ಅವರ ತಲೆಯಲ್ಲಿ ಸುತ್ತಲು ಈಗ ಶುರುವಾಗಿ ಅಷ್ಟೇ.
-ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ