ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳೂರಿನ ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ನೃತ್ಯವಿದುಷಿ ಅಯನಾ ಪೆರ್ಲ ಅವರಿಂದ ದೀಪಂ ಜ್ಯೊತಿ ಎಂಬ ವಿಶೇಷ ಭರತನಾಟ್ಯ ಪ್ರದರ್ಶನ ಜರಗಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಬಿ. ದೇವಾನಂದ ಬೋಳೂರು ಮತ್ತು ಏಳುಪಟ್ಣ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಗೌತಮ್ ಕೋಡಿಕಲ್ ಅವರು ಕಲಾವಿದೆಯನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಕವಿ - ಸಾಹಿತಿ ಡಾ. ವಸಂತಕುಮಾರ ಪೆರ್ಲ, ಮಂಗಳೂರಿನ ಸಂಸ್ಕೃತಭಾರತಿ ಅಧ್ಯಕ್ಷ ಎಂ. ಆರ್. ವಾಸುದೇವ ಮತ್ತು ದೇವಸ್ಥಾನ ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮಣ ಕೋಡಿಕಲ್, ಮಾಧವ ಪುತ್ರನ್ ಕುದ್ರೋಳಿ, ವಾಸುದೇವ ಸಾಲ್ಯಾನ್ ಬೈಕಂಪಾಡಿ, ಅಮರನಾಥ್ ಸುವರ್ಣ ಪಣಂಬೂರು, ಮಾಜಿ ಆಡಳಿತ ಮೊಕ್ತೇಸರ ಸುಂದರ ಗುರಿಕಾರ ಕೂಳೂರು, ಪ್ರಸಿದ್ಧ ತೆಲುಗು ಮತ್ತು ಇಂಗ್ಲಿಷ್ ಸಾಹಿತಿಗಳಾದ ಡಾ. ಎಸ್. ಜಿ. ಕೃಷ್ಣ, ಡಾ. ಮೈಥಿಲಿ ಹಾಗೂ ಪ್ರಮುಖರಾದ ಯಶವಂತ ಪಿ. ಮೆಂಡನ್ ಬೋಳೂರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ