ಕಬಡ್ಡಿ ಕ್ಷೇತ್ರದಲ್ಲಿ ಮಿಂಚುತ್ತಿರುವ ರೂಪೇಶ್ ಪೂಜಾರಿ

Upayuktha
0

ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದು ಯಶಸ್ಸಿನ ಮೊದಲ ಹೆಜ್ಜೆ. ಸತತ ಪರಿಶ್ರಮ ಮತ್ತು ಧೃಡಸಂಕಲ್ಪವೆಂಬ ಅಸ್ತ್ರಗಳು ಇದ್ದಾಗ ಮಾತ್ರ ನಾವು ಜೀವನದಲ್ಲಿ  ಅಂದುಕೊಂಡದ್ದನ್ನು ಸಾಧಿಸಬಹುದು, ಎಂಬುದಕ್ಕೆ ಉತ್ತಮ ನಿದರ್ಶನ ಬಂಟ್ವಾಳದ ಯುವ ಕಬಡ್ಡಿ ಕ್ರೀಡಾಪಟು ರೂಪೇಶ್ ಪೂಜಾರಿ. ತನ್ನ ಬಾಲ್ಯದಿಂದಲೇ ಕಬಡ್ಡಿ  ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿ ತನ್ನ ತಂದೆ-ತಾಯಿಯರ ಪ್ರೋತ್ಸಾಹದಿಂದ ಇದೀಗ ಕಬ್ಬಡಿ ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಮೂಲಕ ಉತ್ತಮ ಕಬ್ಬಡ್ಡಿ ಆಟಗಾರನೆಂದು  ಗುರುತಿಸಿಕೊಂಡಿದ್ದಾರೆ.


ಹಲವಾರು ಕಡೆಗಳಲ್ಲಿ ನಡೆದ ಕಬ್ಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿ ತನ್ನ ಸಾಧನೆಯನ್ನು ಮೆರೆಯುತ್ತಾ ಬಂದಿದ್ದಾರೆ. ನೆಟ್ಲದ ತುಳಸಿವನದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಮೊದಲ ಬಾರಿಗೆ ಪಂದ್ಯವನ್ನು ಗೆಲ್ಲುವುದರ ಮೂಲಕ, ನಂತರ ಹಲವಾರು ಕಡೆಗಳಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಭಟ್ಕಳದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ, ಕಬಕದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ, ಕೆದಿಲದಲ್ಲಿ ನಡೆದ 60 ಕೆಜಿ ತೂಕದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಬೆಸ್ಟ್ ಆಲ್ ರೌಂಡರ್, ಬೆಳ್ತಂಗಡಿಯಲ್ಲಿ ನಡೆದ 65 ಕೆಜಿ ತೂಕದ ಕಬಡ್ಡಿ ಪಂದ್ಯಾವಳಿಯಲ್ಲಿ ದ್ವಿತೀಯಸ್ಥಾನ ಪಡೆಯುವುದರೊಂದಿಗೆ ಬೆಸ್ಟ್ ರೈಡರ್ ಆಗಿ ಗುರುತಿಸಿಕೊಂಡಿರುವರು, ಕಾಸರಗೋಡಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಹಾಗೂ ಬೆಸ್ಟ್ ರೈಡರ್ ಆಗಿ ಗುರುತಿಸಿಕೊಂಡಿರುವ ಹೆಮ್ಮೆಇವರದು, ಮಿತ್ತೂರಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ, ವೊಕ್ಕೆತ್ತುರ್ ನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಹಾಗೂ ಬೆಸ್ಟ್ ರೈಡರ್ ಆಗಿ ಗುರುತಿಸಿಕೊಳ್ಳುವ ಮೂಲಕ ತನ್ನ ಸಾಧನೆಯನ್ನು ಮೆರೆಯುತ್ತಾ ಬಂದಿರುವರು.


ಮೂಲತಃ ಇವರು ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ, ಕೆಲಿಂಜದ ಮಾಡದರು ನಿವಾಸಿಗಳಾದ ಗಣೇಶ್ ಹಾಗೂ ಪ್ರೇಮಲತಾ ದಂಪತಿಗಳ ಪುತ್ರ.ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜ,ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ವಿಠ್ಠಲ ಕಾಲೇಜು  ವಿಟ್ಲದಲ್ಲಿ ಪಡೆದು, ಪ್ರಸ್ತುತ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗವನ್ನು ಪೂರೈಸುತ್ತಿದ್ದಾರೆ.


ಇವರು ತನ್ನ ಪ್ರೌಢಶಾಲೆಯ ದೈಹಿಕ ಶಿಕ್ಷಣ ಗುರುಗಳಾದ ವಿಶ್ವನಾಥ ರಾಥೋಡ್ ಹಾಗೂ ಶ್ರೀನಿವಾಸ್ ಇವರ ತರಬೇತಿ ಹಾಗೂ ಪ್ರೋತ್ಸಾಹದೊಂದಿಗೆ ಮುಂದೆ ತನ್ನ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಗುರುಗಳಾದ ಸುಚೇತನ್ ಜೈನ್ ಇವರ ತರಬೇತಿ ಹಾಗೂ ಪ್ರೋತ್ಸಾಹದೊಂದಿಗೆ ಕಬಡ್ಡಿ ಕ್ಷೇತ್ರದಲ್ಲಿ ಸಾಧನೆಮಾಡುವ ಮೂಲಕ, ಇದೀಗ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಇಲಿಯಾಸ್ ಪಿಂಟೋ ಹಾಗೂ ಹಾಬಿಬ್ ಮಾಣಿ ಇವರ ತರಬೇತಿ ಹಾಗೂ ಮಾರ್ಗದರ್ಶನದ ಮೂಲಕ ತನ್ನನ್ನು ಉತ್ತಮವಾದ ಕಬಡ್ಡಿ ಕ್ರೀಡಾಪಟುವಾಗಿ ಗುರುತಿಸಿಕೊಂಡು ತನ್ನ ಸಾಧನೆಯನ್ನು ಮೆರೆಯುತ್ತಾ ಬಂದಿರುವರು.


- ಶಿಲ್ಪಾ ಜಯಾನಂದ್

ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top