ಮುಜುಂಗಾವಿನಲ್ಲಿ ಪ್ರತಿಭಾ ಭಾರತೀ ಕಾರ್ಯಕ್ರಮ

Upayuktha
0

ಬದಿಯಡ್ಕ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶಾಲಾ ಮಕ್ಕಳ ಪ್ರತಿಭಾ ಭಾರತೀ ಕಾರ್ಯಕ್ರಮ ನಡೆಸಲಾಯಿತು. ೧೦ನೇ ತರಗತಿಯ ವಿದ್ಯಾರ್ಥಿ ಜತನ್ ಸಿ.ವಿ ಅಧ್ಯಕ್ಷತೆಯಲ್ಲಿ ಎಲ್‌ಕೆಜಿ ಯಿಂದ ೧೦ನೇ ತರಗತಿಯ ತನಕದ ಎಲ್ಲಾ ವಿದ್ಯಾರ್ಥಿಗಳೂ ಪಾಲ್ಗೊಂಡ ವಿವಿಧ ಕಾರ್ಯಕ್ರಮಗಳು ನಡೆಯಿತು. 


ಕನ್ನಡ,ಮಲಯಾಳ, ಆಂಗ್ಲ, ಹಿಂದಿ, ಸಂಸ್ಕೃತ ಎಲ್ಲಾ ಭಾಷೆಯಲ್ಲಿಯೂ ಮಕ್ಕಳು ತಮ್ಮ ಪ್ರಾವೀಣ್ಯತೆಯನ್ನು ಮೆರೆದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಾಮಾಜಿಕ ಕಾರ್ಯಕರ್ತ ಮುರಳೀಧರ ಯಾದವ್ ನಾಯ್ಕಾಪು ಮಾತನಾಡಿ ಮಕ್ಕಳ ದೇಹಕ್ಕೆ ಹೊಡೆಯದೆ ಮನಸ್ಸಿಗೆ ನಾಟುವ ರೀತಿಯಲ್ಲಿ ಅಧ್ಯಾಪಕರು ಬೋಧಿಸಿದಾಗ ಅವರು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದ ಅವರು ಶಾಲಾ ಮಕ್ಕಳ ಚಟುವಟಿಕೆ ಹಾಗೂ ನುಡಿಗಳನ್ನು ಮನಸಾ ಶ್ಲಾಘಿಸಿದರು.


ಶಾಲಾ ಮುಖ್ಯೋಪಾಧ್ಯಾಯ ಶ್ಯಾಂಭಟ್ ದರ್ಭೆಮಾರ್ಗ ಹಾಗೂ ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಮಾತನಾಡಿದರು. ಕು|ದೀಕ್ಷಾ ಆರ್.ಕೆ. ಹಾಗೂ ತೇಜಸ್ಸ್ ನಿರೂಪಣೆಗೈದರು. ಕು| ದೀಕ್ಷಿತಾ ಸ್ವಾಗತಿಸಿ, ವಿದ್ಯಾರ್ಥಿ ಪ್ರಾಪ್ತಿಕ್ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top