ಗುಜರಾತ್: ಪ್ರಧಾನಿ ಮೋದಿಯವರು ಇಂದು (ಅ.15) ವಿಡಿಯೋ ಕಾನ್ಫರೆನ್ಸಿಂಗ್ ಮುಖೇನ ಅಖಿಲ ಭಾರತ ಕಾನೂನು ಸಚಿವರು ಹಾಗೂ ಕಾನೂನು ಕಾರ್ಯದರ್ಶಿಗಳ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಗುಜರಾತ್‌ನ ಏಕ್ತಾ ನಗರದಲ್ಲಿ ಎರಡು ದಿನಗಳ ಸಮ್ಮೇಳನವನ್ನು ಕಾನೂನು ಮತ್ತು ನ್ಯಾಯ ಸಚಿವಾಲಯವ ಆಯೋಜಿಸಿದೆ.
ಭಾರತೀಯ ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧ ಪಟ್ಟಂತಹ ಸಮಸ್ಯೆಗಳ ಬಗ್ಗೆ ಈ ಸಮಾವೇಷದಲ್ಲಿ ಚರ್ಚಿಸಲಾಗುವುದು. ಕಾರ್ಯಕ್ರಮದಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನು ಸಚಿವರು ಮತ್ತು ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ (PMO) ಮಾಹಿತಿ ನೀಡಿದೆ.
ಈ ಸಮಾವೇಶದ ಮುಖಾಂತರ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು ತಮ್ಮ ಹೊಸ ಯೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು, ಪರಸ್ಪರ ಸಹಕಾರವನ್ನು ಸಾಧಿಸಲು ಸಾಧ್ಯವಾಗುತ್ತದೆ. ವಿವಾದ ಪರಿಹಾರಕ್ಕೆ ಸಮ್ಮೇಳನವು ಸಾಕ್ಷಿಯಾಗಲಿದೆ.
ಒಟ್ಟಾರೆ ಕಾನೂನು ವ್ಯವಸ್ಥೆಯನ್ನು ನವೀಕರಿಸುವುದು, ಬಳಕೆಯಲ್ಲಿ ಇಲ್ಲದ ಕಾನೂನುಗಳನ್ನು ತೆಗೆದುಹಾಕುವುದು, ಹಾಗೆಯೇ ನ್ಯಾಯದ ಗುಣಮಟ್ಟವನ್ನು ಸುಧಾರಿಸುವುದು, ಬಾಕಿಯಿರುವ ಪ್ರಕರಣಗಳನ್ನು ಪರಿಹರಿಸುವುದು ಮತ್ತು ತ್ವರಿತ ವಿಲೇವಾರಿ ಇತ್ಯಾದಿಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಕೇಂದ್ರ-ರಾಜ್ಯಗಳ ಉತ್ತಮ ಸಮನ್ವಯ ಹಾಗೂ ಸಂಬಂಧಕ್ಕಾಗಿ ರಾಜ್ಯ ಮಸೂದೆಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳಲ್ಲಿ ಏಕರೂಪತೆಯನ್ನು ತರುವುದು ಹಾಗೂ ರಾಜ್ಯ ಕಾನೂನು ವ್ಯವಸ್ಥೆಗಳನ್ನು ಸದೃಢಗೊಳಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ