ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗೂ ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯ ಬಲಿಪಗುತ್ತು ಸುರೇಶ್ ಶೆಟ್ಟಿ ಅವರು 'ಎಕ್ಸ್ಪರಿಮೆಂಟಲ್ ಇನ್ವೆಷ್ಟಿಗೇಷನ್ ಆ್ಯಂಡ್ ಆರ್ಟಿಫಿಷಿಯಲ್ ನ್ಯೂರಲ್ ನೆಟ್‌ವರ್ಕ್ ಮಾಡೆಲಿಂಗ್ ಆಫ್ ಸೈಕಲ್ ಬೈ ಸೈಕಲ್ ಫ್ಲಕ್ಚುವೇಷನ್ಸ್ ಇನ್ ಡ್ಯೂಯಲ್ ಪ್ಲಗ್ ಎಸ್ಐ ಇಂಜಿನ್' ಎಂಬ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಘೋಷಿಸಿದೆ.
ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಪರೀಕ್ಷಾ ನಿಯಂತ್ರಕ ಡಾ. ಶ್ರೀನಿವಾಸ ರಾವ್ ಬಿ.ಆರ್ ಮತ್ತು ಮಣಿಪಾಲದ ಎಂಐಟಿ ಯ ಪ್ರಾಧ್ಯಾಪಕ ಡಾ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಸುರೇಶ್ ಶೆಟ್ಟಿ ಅವರು ಈ ಸಂಶೋಧನೆಯನ್ನು ಪೂರ್ಣಗೊಳಿಸಿರುವರು.
ಸುರೇಶ್ ಶೆಟ್ಟಿ ಅವರು ಬಲಿಪಗುತ್ತು ವಿಠ್ಠಲ್ ಶೆಟ್ಟಿ ಹಾಗೂ ಯಶೋಧಾ ಶೆಟ್ಟಿ ಕಣಂಜಾರು ಅವರ ಪುತ್ರ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ