
ನಿಟ್ಟೆ: ನವದೆಹಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ಅನುಮೋದಿಸಲ್ಪಟ್ಟ ಡಿಶ್ಟಿಂಗ್ವಿಶ್ಡ್ ಛೇರ್ ಪ್ರೊಫೆಸರ್ ಯೋಜನೆಯಡಿಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಇಂಟರ್ನಲ್ ಕ್ವಾಲಿಟಿ ಎಶ್ಯೂರೆನ್ಸ್ ಸೆಲ್ ಅ.11 ಮತ್ತು 12 ರಂದು ಎರಡು ದಿನಗಳ ಕಾಲ ಡಿಸಿಪಿ ಲೆಕ್ಚರ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಐಐಟಿ ಮದ್ರಾಸ್ ನ ಮಾಜಿ ನಿರ್ದೇಶಕ ಡಾ. ಎಂ.ಎಸ್.ಅನಂತ್ ಅವರು 'ದಿ ಐಡಿಯಾ ಆಫ್ ಎ ಯುನಿವರ್ಸಿಟಿ', 'ದಿ ಡಿಮಾಂಡ್ಸ್ ಆಫ್ ಎ ನಾಲೆಡ್ಜ್ ಇಕಾನಮಿ', 'ಗವರ್ನೆನ್ಸ್ ಆಫ್ ಎ ಯುನಿವರ್ಸಿಟಿ' ಮತ್ತು 'ಎಥಿಕ್ಸ್ ಇನ್ ದ ಯುನಿವರ್ಸಿಟಿ' ಎಂಬ ನಾಲ್ಕು ವಿಷಯಗಳ ಬಗೆಗೆ ಸವಿವರವಾಗಿ ಉಪನ್ಯಾಸ ನೀಡಲಿರುವರು ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ