ಕೋಟೂರು ಶ್ರೀ ಕಾರ್ತಿಕೇಯ ಭಜನಾ ಮಂದಿರ ಜೀರ್ಣೋದ್ಧಾರ: ಸಮಿತಿ ರಚನಾ ಸಭೆ

Upayuktha
0

ಕೋಟೂರು: ಕೋಟೂರು ಶ್ರೀ ಕಾರ್ತಿಕೇಯ ಸೇವಾ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ಪುನರ್ ಪ್ರತಿಷ್ಠಾ ಮಹೋತ್ಸವದ ಆಚರಣಾ ಸಮಿತಿ ರೂಪೀಕರಣ ಸಭೆಯು ಕೋಟೂರು ಕೆ ಎ ಯಲ್ ಪಿ ಶಾಲೆಯಲ್ಲಿ ಭಾನುವಾರ (ಅ.02) ಜರಗಿತು. ಖ್ಯಾತ ಉದ್ಯಮಿ ವಸಂತ ಪೈ ಬದಿಯಡ್ಕ ಉದ್ಘಾಟಿಸಿದರು.


ಗೋವಿಂದ ಬಳ್ಳಮೂಲೆ, ಸೋಮಶೇಖರ ಬಳ್ಳುಳ್ಳಾಯ, ಗೋಪಾಲನ್ ಮಣಿಯಾಣಿ ಕಕ್ಕೋಲ್, ಟಿ ಬಾಲಕೃಷ್ಣನ್, ನರಸಿಂಹ ಭಟ್  ಪಾತನಡ್ಕ, ಪ್ರಭಾಕರ ಎರಿಂಚೇರಿ, ವಿದ್ಯಾ ರವೀಂದ್ರನ್, ಶ್ಯಾಮಲಾ ಅಚ್ಯುತನ್, ಸುಕುಮಾರಿ ಟೀಚರ್ ಮತ್ತು ಗೀತಾ ಗೋಪಾಲನ್ ಮಾತನಾಡಿದರು.


ಪ್ರಕಾಶ್ ಸಿ ಎ ಸ್ವಾಗತಿಸಿ, ಶಿವಶಂಕರನ್ ವಂದಿಸಿದರು. ಪದಾಧಿಕಾರಿಗಳಾಗಿ ವಸಂತ ಪೈ ಬದಿಯಡ್ಕ (ಅಧ್ಯಕ್ಷರು), ಕೆ ಗೋಪಾಲನ್ ಕೋಟೂರು (ಕಾರ್ಯಾಧ್ಯಕ್ಷರು), ಪ್ರಕಾಶ್ ಸಿ ಎ (ಸಂಚಾಲಕರು) ಮತ್ತು ಮೋಹನನ್ (ಖಜಾಂಚಿ) ಆಯ್ಕೆಯಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top