ಅ.13ರಿಂದ 3 ದಿನ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಅನುವಾದ ಕಾರ್ಯಾಗಾರ, ಬಹುಭಾಷಾ ಕವಿಸಂಗಮ

Upayuktha
0

 



ಕಾಸರಗೋಡು: ನಾಟ್ಯರತ್ನಂ ಕಣ್ಣನ್ ಪಾಟಾಳಿ ಕಥಕ್ಕಳಿ ಟ್ರಸ್ಟ್ (ರಿ), ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಮತ್ತು ಮಲಯಾಳಂ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತಿನ ಸಹಕಾರದೊಂದಿಗೆ 2022ರ ಅಕ್ಟೋಬರ್ 13 ರಿಂದ ಮೂರು ದಿನಗಳ ಕಾಲ ಅನುವಾದ ಕಾರ್ಯಾಗಾರ ಮತ್ತು ಬಹುಭಾಷಾ ಕವಿಸಂಗಮ ಕಾರ್ಯಕ್ರಮ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಜರಗಲಿದೆ.


ತಜ್ಞ ಅನುವಾದಕರು ಭಾಗಹಿಸುವ ಈ ಕಾರ್ಯಕ್ರಮದಲ್ಲಿ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಭಾಗವಾಗಿ ಆಯೋಜನೆಗೊಂಡಿರುವ ಬಹುಭಾಷಾ ಕವಿ ಸಂಗಮದಲ್ಲಿ  ಮಲಯಾಳಂ, ಕನ್ನಡ, ತುಳು, ಬ್ಯಾರಿ, ಮರಾಠಿ  ಶಿವಳ್ಳಿ, ಹವ್ಯಕ, ಕರಾಡ, ಕೊಂಕಣಿ, ತಮಿಳು, ತೆಲುಗು ಮುಂತಾದ ಹತ್ತಕ್ಕೂ ಹೆಚ್ಚು ಭಾಷೆಗಳ 100ಕ್ಕೂ ಅಧಿಕ ಕವಿಗಳು ಪಾಲ್ಗೊಳ್ಳಲಿದ್ದಾರೆ.


ಅಕ್ಟೋಬರ್ 13ರಂದು ಶಾಸಕ ಎನ್. ಎ. ನೆಲ್ಲಿಕುನ್ನು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಾಂಶುಪಾಲರಾದ ಡಾ.ರೆಮ ಎಂ., ಅಧ್ಯಕ್ಷತೆ ವಹಿಸಲಿದ್ದಾರೆ. ಕಣ್ಣೂರು ವಿಶ್ವವಿದ್ಯಾನಿಲಯ ದೂರ ಶಿಕ್ಷಣ ಕೇಂದ್ರದ ನಿವೃತ್ತ ನಿರ್ದೇಶಕ ಹಾಗೂ ಕಥಕಳಿ ಟ್ರಸ್ಟ್ ಚೇರ್ಮನ್ ಡಾ.ಎ.ಎಂ. ಶ್ರೀಧರನ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಬೆಂಗಳೂರು ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಪ್ರಮೋದ ಮುತಾಲಿಕ, ಕಣ್ಣೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಎಂ.ಸಿ.ರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಡಾ.ಶ್ರೀಧರ ಎನ್., ಡಾ. ಲಿಯಾಕತ್ ಅಲಿ, ಡಾ. ಜಿಜೋ, ಡಾ. ಲಿಜಿ ಎನ್.,ಪ್ರೊ. ರಿಚು ಮ್ಯಾಥ್ಯೂ,  ಹಿರಿಯ ಪತ್ರಕರ್ತ ಶ್ರೀ ವಿ.ವಿ.ಪ್ರಭಾಕರನ್, ಪ್ರೊ ಸುಜಾತ ಎಸ್., ಡಾ. ಬಾಲಕೃಷ್ಣ ಬಿ.ಎಂ.ಹೊಸಂಗಡಿ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 


ಉದ್ಘಾಟನಾ ಕಾರ್ಯಕ್ರಮದ ನಂತರ ಎರಡು ಗೋಷ್ಠಿಗಳು ಜರಗಲಿವೆ. ಮೊದಲ ಗೋಷ್ಠಿಯಲ್ಲಿ ಅನುವಾದದ ವೈಧಾನಿಕತೆಯ ಬಗ್ಗೆ ಪ್ರೊ. ಪ್ರಮೋದ ಮುತಾಲಿಕ, ಎರಡನೆಯ ಗೋಷ್ಠಿಯಲ್ಲಿ  ಅನುವಾದ ಮತ್ತು ಸಾಂಸ್ಕೃತಿಕ ಸಂಘರ್ಷ ಕುರಿತು ಪ್ರೊ. ಪಿ.ಎನ್. ಮೂಡಿತ್ತಾಯ ವಿಷಯ ಮಂಡಿಸಲಿದ್ದಾರೆ. ನಂತರದ ಗೋಷ್ಠಿಯಲ್ಲಿ ಡಾ. ರಾಧಾಕೃಷ್ಣ ಎನ್.ಬೆಳ್ಳೂರು ಮತ್ತು  ಡಾ ರಾಜೀವ್ ಯು.  ಸಂವಾದ ನಡೆಸಿಕೊಡಲಿದ್ದಾರೆ.


ಎರಡನೆಯ ದಿನ ಅಕ್ಟೋಬರ್ 14ರ ಶುಕ್ರವಾರದಂದು ಕಥಕಳಿ ಪ್ರಾತ್ಯಕ್ಷಿಕೆಯ ಪ್ರಯೋಗವು ಡಾ.ಎ.ಎಂ. ಶ್ರೀಧರನ್ ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ. ಕೇರಳ ಫೋಕ್ ಲೋರ್ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮಾಜಿ ಶಾಸಕರಾದ ಶ್ರೀ ಕೆ.ವಿ.ಕುಂಞಿರಾಮನ್ ಪ್ರಾತ್ಯಕ್ಷಿಕೆ ಉದ್ಘಾಟಿಸಲಿದ್ದಾರೆ. ಕೋಟ್ಟಯ್ಕಲ್ ಸಿಎಂ ಉಣ್ಣಿಕೃಷ್ಣನ್, ಡಾ. ವಿ. ಬಾಲಕೃಷ್ಣನ್ ಮತ್ತಿತರರು ಕಥಕಳಿ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಇದಕ್ಕೂ ಮುನ್ನ ಬೆಳಗಿನ ಗೋಷ್ಠಿ ಗಳಲ್ಲಿ ಕನ್ನಡ ಮಲಯಾಳಂ ಅನುವಾದ - ಸವಾಲುಗಳು- ಸಾಧ್ಯತೆಗಳು ಎಂಬ ವಿಷಯದಲ್ಲಿ ಡಾ. ರಾಜೇಶ್ ಬೆಜ್ಜಂಗಳ, ನನ್ನ ಅನುವಾದ ಅನುಭವಗಳು ಎನ್ನುವ ಕುರಿತು ಶ್ರೀ ವಿಕ್ರಂ ಕಾಂತಿಕೆರೆ, ಅನುವಾದ - ಅನಿವಾರ್ಯತೆ ಕುರಿತು ಶ್ರೀ. ಬಿ. ನರಸಿಂಗ ರಾವ್ ವಿಷಯ ಮಂಡಿಸಲಿದ್ದಾರೆ. 


ಸಮಾರೋಪ ಸಮಾರಂಭ ಅಕ್ಟೋಬರ್ 15ರ ಶನಿವಾರ ಜರುಗಲಿದ್ದು ಅಂದು ಬೆಳಗ್ಗೆ ಶ್ರೀ ಮಲಾರ್ ಜಯರಾಮ ರೈ ಅವರ ಅಧ್ಯಕ್ಷತೆಯಲ್ಲಿ ವಿವಿಧ ಭಾಷೆಗಳು ವಿವಿಧ ಆಯಾಮಗಳು ಎನ್ನುವ ವಿಷಯದ ಕುರಿತು ಸಂವಾದ ನಡೆಯಲಿದೆ. ಸಂವಾದದಲ್ಲಿ ಸ್ನೇಹಲತ ದಿವಾಕರ್, ಪ್ರಸನ್ನಕುಮಾರಿ, ಮರ್ದಂಬೈಲ್, ವಿಶಾಲಾಕ್ಷ, ವಿಜಿ ಕಾಸರಗೋಡು, ದಿನೇಶ್ ಕೆಡೆಂಜಿ, ಅಶ್ರಫ್ ಮರ್ತ್ಯ, ಅನುರಾಧಾ ಕಲ್ಲಂಕೂಡ್ಲು, ಕಾರ್ತಿಕ್ ಪಡ್ರೆ ಭಾಗವಹಿಸಲಿದ್ದಾರೆ.


ನಂತರ  ಬಹುಭಾಷಾ ಕವಿ ಸಮ್ಮೇಳನ ಜರಗಲಿದೆ. ಶ್ರೀ ರಾಧಾಕೃಷ್ಣ ಉಳಿಯತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕೇರಳ ಸಾಹಿತ್ಯ ಅಕಾಡೆಮಿ ಸದಸ್ಯ ಇ.ಪಿ. ರಾಜಗೋಪಾಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ರಮಾನಂದ ಬನಾರಿ, ಬಿ.ಎಂ. ರೋಹಿಣಿ, ವಸಂತ ಕುಮಾರ ಪೆರ್ಲ, ಸುಂದರ ಬಾರಡ್ಕ ಪಾಲ್ಗೊಳ್ಳಲಿದ್ದು ವಿವಿಧ ಭಾಷೆಗಳ 75ಕ್ಕೂ ಹೆಚ್ಚು ಕವಿಗಳು ಕವಿತವಾಚಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಶಾಸಕರಾದ ಸಿ ಎಚ್ ಸಿ.ಎಚ್.ಕುಂಞ್ಞ0ಬು ಉದ್ಘಾಟಿಸಲಿದ್ದಾರೆ.


ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಜೇಶ್ವರ ಶಾಸಕ  ಎ.ಕೆ.ಎಂ. ಅಶ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಣ್ಣೂರು ವಿಶ್ವವಿದ್ಯಾನಿಲಯ ಉಪ ಕುಲಪತಿ ಪ್ರೊ. ಸಾಬು ಸಮಾರೋಪ ಭಾಷಣ ಮಾಡಲಿದ್ದಾರೆ, ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಮ್, ಡಾ. ರೇಮಾ ಎಂ., ಪ್ರೊ. ಸುಜಾತಾ ಎಸ್., ಡಾ. ಲಿಜಿ ಎನ್., ಕಥಕ್ಕಳಿ ಟ್ರಸ್ಟ್ ಚೇರ್ಮನ್ ಡಾ. ಎ. ಎಂ. ಶ್ರೀಧರನ್, ಕಾರ್ಯದರ್ಶಿ ಉದಯಭಾನು ಎ. ಕೆ. ಮತ್ತಿತರರು ಭಾಗವಹಿಸಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top