ವಿಶ್ಲೇಷಣೆ: ಮೀಸಲಾತಿಗೊಂದು ಸುಗ್ರೀವಾಜ್ಞೆ ಬೇಕಿತ್ತೇ?

Upayuktha
0

ಸಂವಿಧಾನದಲ್ಲಿ ಉಲ್ಲೇಖಿತ ಮೀಸಲಾತಿಗೆ ರಾಜಕೀಯ ಪಕ್ಷಗಳು ಆಡಳಿತರೂಢ ಪಕ್ಷಗಳು ನ್ಯಾಯ ನೀಡುವುದರಲ್ಲಿ ಸಂಪೂರ್ಣವಾಗಿ ಸೇೂತಿದೆ ಅನ್ನುವುದು ಇತ್ತೀಚಿನ ಮೀಸಲಾತಿ ಪ್ರಮಾಣ ಹೆಚ್ಚಿಸುವುದರ ಮೂಲಕ ಜಗಜಾಹೀರುಗೊಂಡಿದೆ. ಮೀಸಲಾತಿ ಹೆಚ್ಚಿಸುವುದು ಯಾವುದೇ ಪಕ್ಷದ ಸರ್ಕಾರದ ಸಾಧನೆ ಖಂಡಿತವಾಗಿಯೂ ಅಲ್ಲ. ಸಂವಿಧಾನ ನೀಡಿದ ಮೀಸಲಾತಿಗೆ ನ್ಯಾಯ ನೀಡುವುದು ಅಂದರೆ ಸೂಕ್ತವಾಗಿ ಯಾರಿಗೆ ದಕ್ಕಬೇಕೇೂ ಅವರಿಗೆ ಸಮರ್ಪಕವಾಗಿ ತಲುಪಿಸುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಬೇಕಿತ್ತು. ಹೊರತು ಜಾತ್ರೆಯಲ್ಲಿ ಲಡ್ಧು ಹಂಚಿದ ಹಾಗೆ ಬಿಸಾಡಿ ಬಿಟ್ಟರೆ ಅದು ಮೀಸಲಾತಿ ನ್ಯಾಯ ಅನ್ನಿಸುವುದಿಲ್ಲ. ಯಾರಿಗೆ ಸಾಮರ್ಥ್ಯವಿದೆಯೊ ಅವರೇ ಯಾವಾಗಲೂ ಲಡ್ಡು ತಿನ್ನುತ್ತಾರೆ ಬಿಟ್ಟರೆ ನಿಜವಾಗಿ ಹಸಿದವನಿಗೆ ಬಡವನಿಗೆ ಈ ರೀತಿಯಲ್ಲಿ ಸಾರಾಸಗಟಾಗಿ ಹಂಚಿ ಬಿಸಾಡಿದ ಮೀಸಲಾತಿಯಿಂದ ನಯಾಪೈಸೆ ಲಾಭವಿಲ್ಲ ಅನ್ನುವುದು ಆಹ೯ ಬಡ ದೀನ ದಲಿತರ ಒಡಲಾಳದ ಧ್ವನಿಯೂ ಹೌದು.


>ಸಂವಿಧಾನ ರೂಪಿಸುವ ಸಂದರ್ಭದಲ್ಲಿ ಸಂವಿಧಾನ ನಿಮಾ೯ತೃಗಳು ಅಂಬೇಡ್ಕರ್ ರನ್ನು ಸೇರಿಸಿ ಈ ಮೀಸಲಾತಿಯ ಕುರಿತಾಗಿ ಸಾಕಷ್ಟು ಚಚೆ೯ಗಳು ನಡೆಯಿತು. ಮೀಸಲಾತಿ ಬೇಕು ಅನ್ನುವುದು ಎಲ್ಲರ ಧ್ವನಿಯಾಗಿತ್ತು. ಮತ್ತೆ ಅದನ್ನು ಯಾರಿಗೆ ಹೇಗೆ ತಲುಪಿಸ ಬೇಕು ಅನ್ನುವಾಗ ಬಂದ ಪ್ರಮುಖ ವಿಚಾರವೆಂದರೆ ಇದು ಮೊದಲಿಗೆ ಕೇವಲ ಹತ್ತು ವಷ೯ಗಳಿಗೆ. ಈ ಅವಧಿಯಲ್ಲಿ ಸಾಕಷ್ಟು ಮಂದಿ ಬಡ ಶೇೂಷಿತ ದೀನ ದಲಿತರಿಗೆ ಸಾಮಾಜಿಕ ಆಥಿ೯ಕ ಉದ್ಯೋಗ ನ್ಯಾಯ ಸಿಕ್ಕಿಯೇ ಸಿಗುತ್ತದೆ ಅನ್ನುವ ದೃಢ ಸಂಕಲ್ಪದಲ್ಲಿ ಮೀಸಲಾತಿಯನ್ನು ಮೂಲಭೂತ ಹಕ್ಕಿನ ಚೌಕಟ್ಟಿನಲ್ಲಿ ಸೇರಿಸಲಾಯಿತು.


ಆದರೆ ವಿಪರ್ಯಾಸವೆಂದರೆ ಸಂವಿಧಾನ ಬಂದು 75 ವರುಷಗಳ ಕಳೆದ ಮೇಲೂ ಈ ಸಂವಿಧಾನದಲ್ಲಿ ಕಂಡ ಮೀಸಲಾತಿಯ ಆಶಯ ಈಡೇರಲೇ ಇಲ್ಲ. ಅಂದರೆ ಮೀಸಲಾತಿ ಪ್ರಮಾಣ ಹೆಚ್ಚು ಮಾಡಿ ಮತ ಬ್ಯಾಂಕ್ ಗಳಾಗಿ ಪ್ರಯತ್ನ ಮಾಡುತ್ತಿದ್ದಾವೆ ಬಿಟ್ಟರೆ ನಿಜವಾದ ಆರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ವಿಫಲಕೊಂಡಿದ್ದಾವೆ ಅನ್ನುವುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ.


ಬಹು ಮುಖ್ಯವಾಗಿ ಪರಿಶಿಷ್ಟ ಜಾತಿ /ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ನೀಡುವಾಗ ಆರ್ಥಿಕ ಇತಿಮಿತಿ ಹೇರಲೇ ಬೇಕಿತ್ತು. ಅದನ್ನು ಅಂದು ಮಾಡಿಲ್ಲ ಇಂದೂ ಮಾಡುವ ಪರಿಸ್ಥಿತಿಯಲ್ಲಿ ಆಡಳಿತ ರೂಢ ಪಕ್ಷಗಳು ಖಂಡಿತವಾಗಿಯೂ ತಯಾರಿಲ್ಲ. ಉದಾ:ಈ ಮೀಸಲಾತಿಯಿಂದ ಉನ್ನತ ಹುದ್ದೆಗೆ ಏರಿದವರಿಗೆ ಮತ್ತೆ ಅವರ ಮಕ್ಕಳಿಗೊ ಮೊಮ್ಮಕ್ಕಳಿಗೊ ಅದೇ ಮೀಸಲಾತಿ ನೀಡುವುದೆಂದರೆ ಆದೇ ಜಾತಿಯಲ್ಲಿ ಬಡತನ ಗ್ರಾಮೀಣ ಪ್ರದೇಶದಲ್ಲಿ ಇರುವವರ ಪರಿಸ್ಥಿತಿ ಏನಾಗಬೇಕು? ಹೆತ್ತವರ ಬಡತನ ಕಾರಣದಿಂದಾಗಿ ಉತ್ತಮ ಗುಣ ಮಟ್ಟದ ಶಿಕ್ಷಣ ತಮ್ಮಮಕ್ಕಳಿಗೆ ನೀಡಲು ನೀಡಲು ಖಂಡಿತವಾಗಿಯೂ ಸಾಧ್ಯವಿಲ್ಲ. ಅದೇ ಜಾತಿಯಲ್ಲಿ ಇರುವ ಸಿರಿವಂತ  ದಲಿತರ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಮಟ್ಟದ ಹುದ್ದೆಯನ್ನು ಇದೇ ಮೀಸಲಾತಿ ಹೆಸರಿನಲ್ಲಿ ಸುಲಭವಾಗಿ ಪಡೆಯುತ್ತಾರೆ. ಅಂದರೆ ದಲಿತರು ದಲಿತರಿಂದಲೇ ಶೇೂಷಣೆಗೆ ಒಳಗಾಗಬೇಕಾದ ಪರಿಸ್ಥಿತಿ ಈ ನಿಮ್ಮಮೀಸಲಾತಿಯಿಂದ ಸೃಷ್ಟಿಯಾಗಿದೆ ಅನ್ನುವುದನ್ನು ಯಾವ ರಾಜಕಾರಣಿಗಳ ಬಾಯಿಯಿಂದ ಕೇಳಲು ಸಾಧ್ಯವಿಲ್ಲ. ಈ ರೀತಿಯಲ್ಲಿ ನೀವು ಧ್ವನಿ ಏತ್ತಿದಾಗ ಮೊದಲು ಪ್ರತಿ ಧ್ವನಿ ಎತ್ತುವರು ಯಾರು ಕೇಳಿದರೆ ಈ ಮೀಸಲಾತಿಯ ಪ್ರಯೇೂಜನ ಪಡೆದು ಮೇಲಿನ ಸ್ಥಾನದಲ್ಲಿ ನಿಂತಿರುವ ರಾಜಕಾರಣಿಗಳು ಉದ್ಯೋಗಪತಿಗಳು. ನಿಜವಾಗಿಯೂ ಶೇೂಷಿತ ದಲಿತರಿಗೆ ಧ್ವನಿಯೇ ಇಲ್ಲ. ಅವರನ್ನು ಮುಂದೆ ಕೂರಿಸಿ ಕೊಂಡು ಇವರ ಹೋರಾಟ.


ಈಗ ಪ್ರಸ್ತುತ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿರುವುದು ಕೂಡ ಚುನಾವಣಾ ಗಿಮಿಕ್ಸ್ ಅನ್ನುವುದರಲ್ಲಿ ಎರಡು ಮಾತಿಲ್ಲ. ಈ ಮೀಸಲಾತಿ ಹತ್ತು ಹಲವು ಕಠಿಣ ಹೆಜ್ಜೆ ದಾಟಿ ಬರ ಬೇಕಾಗಿದೆ. ಮೀಸಲಾತಿ ಪ್ರಮಾಣ ಶೇ 50ರನ್ನು ದಾಟಿರುವ ಕಾರಣ ಸುಪ್ರೀಂ ಕೇೂರ್ಟು ತಡೆ ಒಡ್ಡಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಅಂತೂ ಅಷ್ಟು ಹೊತ್ತಿಗೆ ಚುನಾವಣೆಯ ಸಂಧಿಕಾಲ. ಪಕ್ಷದ ಪ್ರಣಾಳಿಕೆಯಲ್ಲಿ ಮೀಸಲಾತಿ ಸೇರಿಕೊಂಡಿರುತ್ತದೆ. ಇದುವೇ ನಮ್ಮೆಲ್ಲರ ಮೀಸಲಾತಿಯ ಉದ್ದೇಶ ಅಲ್ವೇ? ಬಹು ಮುಖ್ಯವಾಗಿ ಮತದಾರರರು ಈ ಮೀಸಲಾತಿಯ ಕುರಿತಾಗಿ ಯಾವುದೇ ಚರ್ಚೆಗೆ ಮುಂದಾಗದಿರುವುದು ಆಶ್ಚರ್ಯವೇ ಸರಿ.


-ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top