ನಿಟ್ಟೆ: ಅ.18ರಂದು ಜಪಾನ್ ಮೂಲದ ನಿಡ್ಯಾಕ್ - ರೀಡ್ ಕಂಪೆನಿಯ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ

Upayuktha
0

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಜಪಾನ್ ನ ನಿಡ್ಯಾಕ್-ರೀಡ್ ಕಾರ್ಪೋರೇಶನ್ ಸಂಸ್ಥೆಯ ಸಹಯೋಗದಲ್ಲಿ ನಿಟ್ಟೆ ಕ್ಯಾಂಪಸ್ ನಲ್ಲಿ ನಿಡ್ಯಾಕ್-ರೀಡ್ ಸೆಂಟರ್ ಆಫ್ ಎಕ್ಸಲೆನ್ಸ್ ನ್ನು ಸ್ಥಾಪಿಸಿದೆ. ಈ ಸೆಂಟರನ್ನು ಅ.18 ರಂದು ಬೆಳಗ್ಗೆ 10:30ಕ್ಕೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ ಎನ್. ವಿನಯ ಹೆಗ್ಡೆ ಅವರು ಉದ್ಘಾಟಿಸಲಿರುವರು.


ಈ ಸಂದರ್ಭದಲ್ಲಿ ನಿಡ್ಯಾಕ್ - ರೀಡ್ ಸಂಸ್ಥೆಯ ನಿರ್ದೇಶಕ ಹಾಗೂ ಸಿ.ಇ.ಒ ಹಿಡೆಕಾಜು ಯಮಜಕಿ, ಉಪನಿರ್ದೇಶಕ ತಕಶಿ ಮಿಕಿ, ಬೋರ್ಡ್ ಟೆಸ್ಟ್ ವಿಭಾಗದ ವ್ಯವಸ್ಥಾಪಕ ತದಕಜು ಮಿಯಟಕೆ ಹಾಗೂ ಹ್ಯೂಮನ್ ರಿಸೋರ್ಸ್ ವಿಭಾಗದ ಗ್ರೂಪ್ ಲೀಡ್ ಕತ್ಸುಮಿ ಕಸನೊ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ನಿಟ್ಟೆ ವಿಶ್ವವಿದ್ಯಾಲಯದ ಪ್ರೊ - ಚಾನ್ಸಲರ್ ಗಳಾದ ಪ್ರೊ.ಡಾ. ಶಾಂತರಾಮ್ ಶೆಟ್ಟಿ, ಶ್ರೀ ವಿಶಾಲ್ ಹೆಗ್ಡೆ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಾ.ಸತೀಶ್ ಕುಮಾರ್ ಭಂಡಾರಿ ಹಾಗೂ ಪ್ರೊ- ವೈಸ್ ಚಾನ್ಸಲರ್ ಡಾ.ಎಂ.ಎಸ್ ಮೂಡಿತ್ತಾಯ ಅವರು ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.


ನಿಡ್ಯಾಕ್-ರೀಡ್ ಕಂಪೆನಿಯು ಮಾಪನ ಹಾಗೂ ತಪಾಸಣಾ ಉಪಕರಣಗಳನ್ನು ತಯಾರಿಸಿ ವಿಶ್ವದಾದ್ಯಂತ ಹೆಸರುವಾಸಿಯಾದ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯೊಂದಿಗೆ ನಿಟ್ಟೆ ತಾಂತ್ರಿಕ ಕಾಲೇಜು ೨೦೨೦ ನೇ ಇಸವಿಯಿಂದ ಉತ್ತಮ ಬಾಂಧವ್ಯವನ್ನು ಹೊಂದಿದ್ದು ಇಂಟರ್ನ್ಶಿಪ್ ಹಾಗೂ ಉದ್ಯೋಗಾವಕಾಶವನ್ನು ನೀಡುವ ಮೂಲಕ ಸಹಕರಿಸುತ್ತಿದೆ.


ಈ ಸೆಂಟರ್ ಆಫ್ ಎಕ್ಸಲೆನ್ಸ್ ನ ಪ್ರಥಮ ಯೋಜನೆಯಡಿಯಲ್ಲಿ ಸಾಫ್ಟ್ ವೇರ್ ಡೆವಲಪ್ಮೆಂಟ್ ಹಾಗೂ ಮೆಕ್ಯಾನಿಕಲ್ ಡಿಸೈನ್ಸ್ ನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತಾರಾ‍ಷ್ಟ್ರೀಯ ಸಹಯೋಗ ವಿಭಾಗದ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top