ಅಂಚೆ ಗ್ರಾಹಕರಿಗೆ ಇ-ಪಾಸ್ ಬುಕ್ ಸೌಲಭ್ಯ ನೀಡಿದ ಸರಕಾರ

Upayuktha
0

ನವದೆಹಲಿ: ಅಂಚೆ ಕಛೇರಿಯಲ್ಲಿ ಸಣ್ಣ ಉಳಿತಾಯ ಯೋಜನೆಗಳನ್ನು ಆರಂಭ ಮಾಡಿದವರು ಇನ್ನು ಮುಂದೆ ತಮ್ಮ ಖಾತೆಯ ಮಾಹಿತಿಯನ್ನು ಪಡೆದುಕೊಳ್ಳಲು ಕಷ್ಟ ಪಡಬೇಕಾಗಿಲ್ಲ. ಯಾವಾಗ ಬೇಕಾದರೂ, ಎಲ್ಲೇ ಇದ್ದರೂ, ಯಾವುದೇ ಸಭಯದಲ್ಲಾದರೂ ಮೊಬೈಲ್ ಬ್ಯಾಂಕಿಂಗ್, ನೆಟ್‌ ಬ್ಯಾಂಕಿಂಗ್‌ ಇತ್ಯಾದಿಗಳು ಇಲ್ಲದೆಯೇ ಖಾತೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹೇಗೆ ಅಂತೀರಾ, ಈ ಮಾಹಿತಿಯನ್ನು ಓದಿ.


ಸರಕಾರವು ಅಂಚೆ ಕಛೇರಿಯ ಖಾತೆಗಳಿಗೆ 'ಇ-ಪಾಸ್‌ಬುಕ್‌' ಸೌಲಭ್ಯವನ್ನು ಒದಗಿಸಿದೆ. ಈ ಮೂಲಕ ಗ್ರಾಹಕರಿಗೆ ಖಾತೆ ಬಗ್ಗೆ ಮಾಹಿತಿ ಪಡೆಯಲು ಮತ್ತಷ್ಟು ಅನುಕೂಲ ಆಗುವಂತೆ ಮಾಡಿದೆ. ದೇಶಾದ್ಯಂತ ಇರುವ ಅಂಚೆ ಕಚೇರಿಗಳಲ್ಲಿ ಅ.12ರಿಂದ ಇ-ಪಾಸ್‌ಬುಕ್‌ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಯ ಮೂಲಕ ಗ್ರಾಹಕರು ತಮ್ಮ ಖಾತೆಗೆ ನೋಂದಾಯಿಸಲ್ಪಟ್ಟ ಮೊಬೈಲ್‌ ಸಂಖ್ಯೆಯ ಮುಖಾಂತರ ಇ-ಪಾಸ್‌ ಬುಕ್‌ ಸೇವೆಯನ್ನು ಉಚಿತವಾಗಿಯೇ ಬಳಸಿಕೊಳ್ಳಬಹುದು.


ಸುಕನ್ಯ ಸಮೃದ್ಧಿ ಯೋಜನೆ, ನಿಮ್ಮ ರಾಷ್ಟ್ರೀಯ ಉಳಿತಾಯ ಯೋಜನೆಗಳ ಖಾತೆ ವಿವರ, ಪಿಪಿಎಫ್ ವಿವರ, ಮಿನಿ ಸ್ಟೇಟ್‌ಮೆಂಟ್‌ ಸೇರಿದಂತೆ ಇತರ ಮಾಹಿತಿಯನ್ನು ಇ-ಪಾಸ್‌ಬುಕ್‌ ಸೇವಯ ಮುಖಾಂತರ ಪಡೆದುಕೊಳ್ಳಬಹುದು.


ಈ ಸೇವೆಯನ್ನು ಪಡೆಯುವ ಪ್ರಕ್ರಿಯೆ


www.ippbonline.com ಅಥವಾ www.indiapost.gov.in ಇಲ್ಲಿ ನೀಡಲಾದ ಇ-ಪಾಸ್‌ಬುಕ್‌ ಲಿಂಕ್ ತೆರೆದು ಖಾತೆಗೆ ನೋಂದಾಯಿಸಲ್ಪಟ್ಟ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಲಾಗಿನ್ ಆಗಿ ಒ.ಟಿ.ಪಿ ಹಾಕಬೇಕು. ನಂತರ 'ಸಬ್‌ ಮಿಟ್‌' ಎಂಬ ಆಯ್ಕೆಯನ್ನು ಒತ್ತಬೇಕು. ಬಳಿಕ 'ಇ-ಪಾಸ್‌ಬುಕ್‌' ಎಂದು ಇರುವುದನ್ನು ಆರಿಸಿಕೊಳ್ಳಬೇಕು. ಮುಂದೆ ನೀವು ನಿಮ್ಮ ಯೋಜನೆಯ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು.


ಅಲ್ಲಿ ಮತ್ತೆ ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ಒಟಿಪಿ ಯನ್ನು ನಮೂದಿಸಿ ದೃಢೀಕರಣ ಮಾಡಬೇಕು. ಆಗ ನಿಮ್ಮ ಮುಂದೆ 'ಬ್ಯಾಲೆನ್ಸ್‌ ಎಂಕ್ವೈರಿ', 'ಮಿನಿ ಸ್ಟೇಟ್‌ಮೆಂಟ್‌', 'ಫುಲ್ ಸ್ಟೇಟ್‌ಮೆಂಟ್‌' ಇತ್ಯಾದಿ ಆಯ್ಕೆಗಳು ಕಾಣಸಿಗುತ್ತವೆ. ನಿಮಗೆ ಯಾವ ಸೇವೆ ಬೇಕೋ, ಆ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ರೀತಿಯಾಗಿ ಇ-ಪಾಸ್‌ಬುಕ್‌ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬಹುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
To Top