ಉಜಿರೆ: ಮಂಡ್ಯ ಜಿಲ್ಲಾ ಉತ್ಸವ ಕಾರ್ಯಕ್ರಮದ ಅಂಗವಾಗಿ ಅ 13, 14, 15 ಮತ್ತು 16ರಂದು ತ್ರಿವೇಣಿ ಸಂಗಮ ಹಂಬಿಗರ ಹಳ್ಳಿ - ಸಂಗಾಪುರ - ಪುರ ಕೆ ಆರ್ ಪೇಟೆ ಮಂಡ್ಯ ಜಿಲ್ಲೆಯಲ್ಲಿ ಶ್ರೀ ಶ್ರೀ ಮಲೆಮಹದೇಶ್ವರ ಮಹಾಕುಂಭಮೇಳ 2022ರ ಉದ್ಘಾಟನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಸಮಿತಿಯ ಅಧ್ಯಕ್ಷ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ರೇಷ್ಮೆ ಯುವ ಸಬಲೀಕರಣ ಕ್ರೀಡಾ ಸಚಿವ ಡಾ| ನಾರಾಯಣ ಗೌಡ ಮತ್ತು ಅಬಕಾರಿ ಮತ್ತು ಮಂಡ್ಯ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮತ್ತು ಸಮಿತಿ ಸದಸ್ಯರು ಮಂಗಳವಾರ ಬೆಂಗಳೂರಿನ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಯ ಕ್ಷೇಮವನಕ್ಕೆ ಭೇಟಿ ನೀಡಿ ಆಹ್ವಾನ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ