ಪುತ್ತೂರು: ಮುಳಿಯ ಜ್ಯುವೆಲ್ಸ್‌ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯಲ್ಲಿ ಧಾರ್ಮಿಕ ಶಿಕ್ಷಣ ತರಗತಿ ಉದ್ಘಾಟನೆ

Upayuktha
0

ಪುತ್ತೂರು: ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಮುಳಿಯ ಜ್ಯುವೆಲ್ಸ್‌ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯಲ್ಲಿ  ಧಾರ್ಮಿಕ  ಶಿಕ್ಷಣ ತರಗತಿಗಳನ್ನು ಶನಿವಾರ (ಅ.1)  ಉದ್ಘಾಟಿಸಲಾಯಿತು.

ಸಂಜೆ 4:00 ಗಂಟೆಗೆ ನಡೆದ ಕಾರ್ಯಕ್ರಮವನ್ನು ದೀಪೋಜ್ವಲನದ ಮೂಲಕ ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಯಾಗಿ ಪುತ್ತೂರು ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾ ಬೆಳ್ಳಾರೆ ಪಾಲ್ಗೊಂಡರು.

ತರಗತಿಯ ಮೊದಲ ದಿನವೇ 25ಕ್ಕೂ ಹೆಚ್ಚು ಮಕ್ಕಳು ಹಾಜರಿದ್ದರು.  ಸುಪ್ರಭಾ ಅವರು ಕಾರ್ಯಕ್ರಮ ನಿರೂಪಿಸಿದರು. ಸತ್ಯನಾರಾಯಣ ಭಟ್‌ ಅವರು ತರಗತಿ ನಡೆಸಿಕೊಟ್ಟರು. ಮುಳಿಯ ಜ್ಯುವೆಲ್ಸ್‌ನ ಎಲ್ಲ ಅಧಿಕಾರಿ- ಸಿಬ್ಬಂದಿ ವರ್ಗ ಕಾರ್ಯಕ್ರಮಕ್ಕೆ ಸಹಕರಿಸಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್‌ ಮುಳಿಯ ಅವರು ಗೌರವ ಉಪಸ್ಥಿತರಿದ್ದರು.


web counter

إرسال تعليق

0 تعليقات
إرسال تعليق (0)
To Top