ಉಜಿರೆಯ ದಿ ಓಷ್ಯನ್ ಪರ್ಲ್ ನಲ್ಲಿ ಡಿ.ಹರ್ಷೇಂದ್ರ ಕುಮಾರ್ ಹುಟ್ಟುಹಬ್ಬ ಆಚರಣೆ

Upayuktha
0

ಧರ್ಮಸ್ಥಳದ ಹೋಟೆಲ್ ನಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರ ಹುಟ್ಟುಹಬ್ಬ ಆಚರಣೆ ಅತ್ಯಂತ ಸಂಭ್ರಮದಿಂದ ಜರಗಿತು.


ಧರ್ಮಸ್ಥಳ: ನೂತನವಾಗಿ ಲೋಕಾರ್ಪಣೆಗೊಂಡ ದಿ ಓಷ್ಯನ್ ಪರ್ಲ್ ಉಜಿರೆ, ಡಿ.ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ದಂಪತಿಯನ್ನು ಒಷ್ಯನ್ ಪರ್ಲ್ ಉಜಿರೆಯ ಮಾಲೀಕರಾದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅವರು ಹಾಗೂ ಒಷ್ಯನ್ ಪರ್ಲ್ ಗ್ರೂಪ್ ನ ವೈಸ್ ಪ್ರೆಸಿಡೆಂಟ್ ಶ್ರೀ ಬಿ ಎನ್ ಗಿರೀಶ್ ಆತ್ಮೀಯವಾಗಿ ಸ್ವಾಗತಿಸಿ ಹುಟ್ಟು ಹಬ್ಬದ ಶುಭಾಶಯ ಕೋರಿ ಅಭಿನಂದಿಸಿದರು. ಈ ಸಂಧರ್ಭದಲ್ಲಿ ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ತಂಡ ಯಕ್ಷಗಾನ ನಾಟ್ಯ ವೈಭವದ ಮೂಲಕ ವಿಶೇಷವಾಗಿ ದಂಪತಿಗಳಿಗೆ ದೀಪಾರತಿ ಬೆಳಗುವ ಮೂಲಕ ಶುಭಾಶಯ ಸಲ್ಲಿಸಿದರು.


ಈ ವೇಳೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಮೈತ್ರಿ, ಮಾನ್ಯ, ಆರ್ಯಾಮಾನ್, ಕಿಯಾಂಶ್, ಹಾಗೂ ಹರ್ಷೇಂದ್ರ ಕುಮಾರ್ ಅವರ ಕುಟುಂಬ ಸದಸ್ಯರು ಉಪಸ್ಥತರಿದ್ದು ಅತ್ಯಂತ ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಖುಷಿ ಪಟ್ಟರು.


ಈ ಸಂದರ್ಭದಲ್ಲಿ  ಅತಿಥಿ ಸತ್ಕಾರ, ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ಬಗ್ಗೆ ಹೆಗ್ಗಡೆ ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಓಷಿಯನ್ ಪರ್ಲ್ ಸಂಸ್ಥೆಯವರು ವಿಶೇಷವಾಗಿ ನಿರ್ಮಿಸಿದ ಡಿ. ಹರ್ಷೇಂದ್ರ ಕುಮಾರ್ ಅವರ ಜೀವನದ ಹಲವು ಮಜಲುಗಳನ್ನು ಪರಿಚಯಿಸುವ ಕಿರು ಚಿತ್ರವನ್ನು ಈ ಪ್ರಸ್ತುತ ಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top