ಹಬ್ಬಗಳು ಮಾನವ ಜೀವನದ ಬಹುಮುಖ್ಯ ಅಂಶವಾಗಿದೆ. ಬಾಂಧವ್ಯ ಪ್ರೀತಿಯಿಂದ ಸಮಾಜದಲ್ಲಿ ಜೀವನವನ್ನು ಹಂಚಿಕೊಳ್ಳುವಂತಹ ಸಂಭ್ರಮಗಳಲ್ಲಿ ಹಬ್ಬಗಳು ಕೂಡ ಒಂದು. ನಮ್ಮ ಸುತ್ತಲಿನ ನೆರೆಹೊರೆಯವರನ್ನು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಸಂಬಂಧ ಬೆಸೆಯಲು ಹಬ್ಬಗಳು ಪೂರ್ಣವಾದ ಮಾರ್ಗವಾಗಿರುವಂತದ್ದು. ದೀಪಾವಳಿಯು ಕತ್ತಲನ್ನು ಬೆಳಕಾಗಿ ಹರಿಸುವ ಹಬ್ಬವಾಗಿದೆ, ದೀಪಾವಳಿ ಹಬ್ಬ ಬಹಳ ಹಿಂದಿನಿಂದಲೂ ಪಟಾಕಿ ಸಿಡಿಸುವುದರೊಂದಿಗೆ ಸಂಬಂಧ ಹೊಂದಿದೆ. ಆದರೆ ಪಟಾಕಿಗಳನ್ನು ಸಿಡಿಸುವುದರಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯದಿಂದಾಗಿ ವಾತಾವರಣದಲ್ಲಿ ಬಿಡುಗಡೆಯಾಗುವ ಅನಿಲಗಳ ಏರು-ಪೇರುಗಳಿಂದಾಗಿ ಜೀವಾಪಾಯಕ್ಕೆ ದಾರಿಮಾಡಿಕೊಡುತ್ತದೆ. ಆದ್ದರಿಂದ ಪಟಾಕಿಯನ್ನು ಮಿತವಾಗಿ ಬಳಸಿ ದೀಪವನ್ನು ಎಲ್ಲೆಡೆ ಹಚ್ಚುವ ಹಬ್ಬ ನಮ್ಮದಾಗಿರಲಿ.
ಈ ಹಬ್ಬವನ್ನು ಐದು ದಿನಗಳ ಕಾಲ ವಿಜೃಂಭಣೆಯಿಂದ ಪ್ರತಿಯೊಂದು ಮನೆಯಲ್ಲಿಯೂ ಮನ-ಮನದಲ್ಲಿಯೂ ವಿಶೇಷವಾಗಿ ಆಚರಿಸುವಂತದ್ದು. ಬೆಳಗುವ ದೀಪದ ಬೆಳಕು ಕೇವಲ ಐದು ದಿನಗಳ ಮಾತ್ರವಲ್ಲದೆ ಪ್ರತಿಯೊಬ್ಬರ ಬದುಕಿನಲ್ಲಿಯೂ ಜೀವನದ ಕೊನೆಯ ಘಟ್ಟದವರೆಗೂ ಬಾಳ ಬೆಳಕಾಗಿರಲಿ. ದೀಪದಂತಹ ನಿಮ್ಮ ಬದುಕು ಸದಾ ಹೊಳೆಯುತ್ತಿರಲೆಂದು ಹಾರೈಸುತ್ತಾ ದೀಪಗಳ ಹಬ್ಬ ದೀಪಾವಳಿಯ ಶುಭಾಶಯಗಳು.
-ದೀಕ್ಷಿತ ಗಿರೀಶ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ