ಶೋಭಾ ಐತಾಳ್ ಅವರಿಗೆ ದಸರಾ ಸಂಮಾನ

Upayuktha
0

ಮಂಗಳೂರು: ಹವ್ಯಾಸಿ ಯಕ್ಷಗಾನ ಕಲಾವಿದೆ ಶ್ರೀಮತಿ ಶೋಭಾ ಐತಾಳ್ ಅವರನ್ನು ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ದಸರಾ ವಾರ್ಷಿಕ ಬಯಲಾಟ ವೇದಿಕೆಯಲ್ಲಿ ಸಂಮಾನಿಸಲಾಯತು.


ಕಳೆದ ಹನ್ನೆರಡು ವರ್ಷಗಳಿಂದ ಯಕ್ಷಗಾನ ವೇಷ, ಭಾಗವತಿಕೆಯಲ್ಲಿ ಪ್ರಾವೀಣ್ಯತೆ ಸಾಧಿಸಿ ವಾಗೀಶ್ವರೀ ಸಂಘದ ವಾರದ ಕೂಟದಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಶಿಕ್ಷಕಿ, ನಿರೂಪಕಿ ಸಂಘಟಕಿ ಶೋಭಾ ಅವರ ಬದ್ದತೆ, ರಂಗ ನಿಷ್ಠೆಯನ್ನು ನೆನಪಿಸಿ ಶಿವಪ್ರಸಾದ್ ಪ್ರಭು ಅಭಿನಂದಿಸಿದರು.


"ಮಂಗಳೂರಿನ ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ಮಂಗಳೂರು ಶಾರದೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ವರ್ಷಂಪ್ರತಿ ವಾಗೀಶ್ವರೀ ಸಂಘದ ಕಲಾವಿದರು ಯಕ್ಷಗಾನ ಬಯಲಾಟ ಪ್ರದರ್ಶನದ ಸಂಧರ್ಭದಲ್ಲಿ ಸಂಘದ ಕಲಾವಿದರನ್ನು ಸಂಮಾನಿಸುವ ಪರಂಪರೆ ನಾಲ್ಕು ದಶಕಗಳಿಂದ ಮುಂದುವರಿಯುತ್ತಿದೆ. ಈ ಸಂಘದ ಮೂಲಕ ಹಲವಾರು ಕಲಾವಿದರು ಸಿದ್ಧಿ ಪ್ರಸಿದ್ದಿ ಪಡೆದಿದ್ದಾರೆ" ಎಂದು ಕ್ಷೇತ್ರದ ಅರ್ಚಕ ವಾಸುದೇವ ಭಟ್ ಶುಭಾಶೀರ್ಬಾದ ಮಾಡಿದರು.


ಮಹಾಮಾಯಾ ದೇವಳದ ಅಂಗಣದಲ್ಲಿ ನಾಲ್ಕು ದಶಕಗಳ ಪೂರ್ವದಲ್ಲಿ ವಾಗೀಶ್ವರೀ ಸಂಘದ ಇದೇ ವೇದಿಕೆಯಲ್ಲಿ ತನ್ನ ಮೊದಲ ಸಾರ್ವಜನಿಕ ಭಾಷಣದ ನೆನಪು ಮಾಡಿಕೊಂಡ ಸಂಘದ ಗೌರವಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅವರು ಎನ್. ಮಾಧವ ಆಚಾರ್ಯ, ನರಸಿಂಹ ಪ್ರಭು, ಶ್ರೀನಿವಾಸ ಭಟ್ ಮೊದಲಾದ ಕೀರ್ತಿಶೇಷ ಹಿರಿಯರ ಕೊಡುಗೆಯನ್ನು ಸ್ಮರಿಸಿದರು.


ಸಂಘದ ಸಂಚಾಲಕರಾದ ಕದ್ರಿ ನವನೀತ ಶೆಟ್ಟಿ ಮತ್ತು ಪಿ.ಸಂಜಯ ಕುಮಾರ್ ರಾವ್ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.


ಸಂಘದ ಅಧ್ಯಕ್ಷ ಶ್ರೀನಾಥ್ ಎನ್.ಪ್ರಭು, ಉಪಾಧ್ಯಕ್ಷೆ ಪ್ರಪುಲ್ಲ ನಾಯಕ್, ಅಶೋಕ್ ಬೋಳೂರು, ಪ್ರಭಾಕರ ಕಾಮತ್, ಪ್ರೀತಂ ಸೇರಾಜೆ ಉಪಸ್ಥಿತರಿದ್ದರು. ಶೋಭಾ ಐತಾಳ್ ಅವರ ದಾಕ್ಷಾಯಿಣಿ ಪಾತ್ರನಿರ್ವಹಣೆಯ "ಶಿವಶಕ್ತಿ" ಹಾಗೂ ಕದ್ರಿ ನವನೀತ ಶೆಟ್ಟಿ ರಚನೆಯ "ಶ್ರೀ ದೇವಿ ಮಾರಿಯಮ್ಮ" ಯಕ್ಷಗಾನ ಬಯಲಾಟ ಜರಗಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top