ಸಾವಿರಕ್ಕೆ ಒಬ್ಬ ಕಲಾವಿದ ಸಚಿನ್‌ ಆಚಾರ್ಯ

Upayuktha
0

ಲೆಯೆಂಬುದು ಮಾನವೀಯ ಸಂಬಂಧಗಳನ್ನು ಮತ್ತಷ್ಟು ಗಾಢಗೊಳಿಸುವ ಸೇತುವೆ. ಚಿತ್ರಕಲೆಯ ಕಲ್ಪನೆಯಿಲ್ಲದೆ  ರಂಗಭೂಮಿಯು ಪರಿಪೂರ್ಣತೆಯಾಗುವುದಿಲ್ಲ, ಕಲೆಗೆ ಜೀವ ಬರಬೇಕೆಂದರೆ ಕಲಾವಿದನಲ್ಲಿ ಚಲನೆ ಇರಬೇಕು. ಮನಸ್ಸಿನಲ್ಲಿ ಮೂಡಿದ ವಿಷಯಕ್ಕೆ ಕುಂಚದ ಮೂಲಕ ಚಿತ್ರರೂಪ ಕೊಡುವುದು ಕಷ್ಟದ ಕೆಲಸ ಆದರೂ ಆ ಕಷ್ಟದ ಕೆಲಸಕ್ಕೆ ಇಷ್ಟದ ಲೇಪನ ಕೊಟ್ಟು ಕುಂಚದಲ್ಲಿ ಮನಸೂರೆಗೊಳಿಸುವ ವಿವಿಧ ಬಗೆಯ ಸಾವಿರಾರು ಚಿತ್ರಗಳನ್ನು ಬಿಡಿಸುತ್ತಾರೆ ಸಚಿನ್ ಆಚಾರ್ಯ.


ಹೌದು, ಇವರು ತಮ್ಮ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿಯನ್ನು ಇಟ್ಟುಕೊಂಡು ಅದೇ ಕಲೆಯನ್ನು ಕರಗತವನ್ನಾಗಿರಿಸಿಕೊಂಡು ಅದೆಷ್ಟು ಸಣ್ಣಪುಟ್ಟ ಚಿತ್ರಕಲೆಗಳನ್ನು ಬಿಡಿಸಿಕೊಂಡು,ಇದೀಗ ಹದಿನೈದು ವರ್ಷಗಳಿಂದ ಎರಡು ಸಾವಿರಕ್ಕಿಂತಲ್ಲೂ ಹೆಚ್ಚು ಚಿತ್ರಕಲೆಗಳನ್ನು ರಚಿಸಿ ಅವುಗಳಿಗೆ ಕುಂಚದ ಮೂಲಕ ಬಣ್ಣ ಬಳಿದು ಜೀವಗಳನ್ನು ತುಂಬಿಸುತ್ತಿರುವ ಅದ್ಭುತ ಯುವ ಕಲಾವಿದ ಎನ್ನುವುದಕ್ಕೆ ಎರಡು ಮಾತಿಲ್ಲ. 2017ರಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದಂತಹ ಸೇವ್ ಓಝೋನ್ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವುದು ಇವರ ಹೆಮ್ಮೆಯಾಗಿದೆ. ಇದಲ್ಲದೇ ಹಲವಾರು ಕಡೆಗಳಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ನಲವತ್ತಕ್ಕಿಂತಲೂ ಹೆಚ್ಚು ಬಹುಮಾನ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವರು. ಕ್ಯಾನ್ವಾಸ್ ಪೈಂಟಿಂಗ್, ವಾಟರ್ ಕಲರ್, ಪೆನ್ಸಿಲ್ ಸ್ಕೆಚ್, ವಾಲ್ ಪೇಂಟಿಂಗ್, ಡಿಜಿಟಲ್ ಪೇಂಟಿಂಗ್ ಮುಂತಾದ ಹಲವಾರು ವಿವಿಧ ರೀತಿಯ ಶೈಲಿಗಳನ್ನು ಉಪಯೋಗಿಸಿಕೊಂಡು ತನ್ನ ಚಿತ್ರಕಲೆಯ ಚಾಪನ್ನು ಮೂಡಿಸಿರುವರು.


ಮೂಲತಃ ಇವರು ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ, ಗೋಳಿಯಂಗಡಿಯ ನಿಟ್ಟಡೆ ಗ್ರಾಮದ ನಿವಾಸಿಗಳಾದ ಚಂದ್ರಯ ಆಚಾರ್ಯ ಹಾಗೂ ಸರಸ್ವತಿ ದಂಪತಿಗಳ ಪುತ್ರ.ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಉನ್ನತ ಪ್ರಾರ್ಥಮಿಕ ಶಾಲೆ ನಿಟ್ಟಡೆ, ಪ್ರೌಢ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ವೇಣೂರು, ಹಾಗೂ ಪದವಿ ಶಿಕ್ಷಣವನ್ನು ಸರಕಾರಿ ಪದವಿಪೂರ್ವ ಕಾಲೇಜು ವೇಣೂರಿನಲ್ಲಿ ಪಡೆದು, ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ವರ್ಷದ ಬಿವಿಎ ಶಿಕ್ಷಣವನ್ನು ಪೂರೈಸುತ್ತಿರುವರು.


- ಶಿಲ್ಪಾ ಜಯಾನಂದ್

ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜ್, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top