ಅ. 16ರಂದು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಉದ್ಘಾಟನೆ ಮಾಡಲಿರುವ ಮೋದಿ

Upayuktha
0

ದೆಹಲಿ: ಅಕ್ಟೋಬರ್ 16 ರಂದು ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮುಖಾಂತರ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ಉದ್ಘಾಟನೆ ಮಾಡಲಿದ್ದಾರೆ.ಈ ಬಗ್ಗೆ ಹಣಕಾಸು ಸಚಿವಾಲಯವು ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಹಿತಿಯನ್ನು ನೀಡಿದೆ. ನಮ್ಮ ದೇಶವು ಸ್ವಾತಂತ್ರ್ಯ ಪಡೆದು 75 ವರ್ಷಗಳು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ದೇಶದ 75 ಜಿಲ್ಲೆಗಳಲ್ಲಿ 75 ಡಿಬಿಯುಗಳನ್ನು ಸ್ಥಾಪನೆ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕ (ಡಿಬಿಯು) ಗಳನ್ನು ಉದ್ಘಾಟನೆ ಮಾಡುವರು. ಇದು ಕನಿಷ್ಠ 10 ಉತ್ಪನ್ನಗಳು ಹಾಗೂ ಸೇವೆಗಳನ್ನು ಒಳಗೊಂಡಿರುತ್ತದೆ.


ಸೇವೆಗಳು ಮತ್ತು ಸೌಲಭ್ಯಗಳು


DBU ಸೇವೆಗಳ ಪ್ರಾರಂಭದಲ್ಲಿ ಉಳಿತಾಯ, ನಗದು ಹಿಂಪಡೆಯುವಿಕೆ, ಕರೆಂಟ್, RD-FD, ಪಾಸ್‌ಬುಕ್ ಮುದ್ರಣದಂತಹ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. DBU ಸೇವೆಗಳ ಪ್ರಾರಂಭದಲ್ಲಿ ಉಳಿತಾಯ, ಕರೆಂಟ್, RD-FD, ನಗದು ಹಿಂಪಡೆಯುವಿಕೆ, ಪಾಸ್‌ಬುಕ್ ಮುದ್ರಣದಂತಹ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಗ್ರಾಹಕರು ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್‌ಗಳು, ಸಮೂಹ ಸಾರಿಗೆ ವ್ಯವಸ್ಥೆ ಕಾರ್ಡ್‌ಗಳು, UPI QR ಕೋಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು, BHIM ಆಧಾರ್ ಮತ್ತು ಪಾಯಿಂಟ್ ಆಫ್ ಸೇಲ್ ಕಾರ್ಡ್‌ಗಳಿಗಾಗಿ ಡಿಜಿಟಲ್ ಕಿಟ್ ಅನ್ನು ಇದು ಹೊಂದಿರುತ್ತಾರೆ.


ಕಾಗದರಹಿತ ಸೇವೆ


ಡಿಬಿಯುನ ಆರಂಭದಲ್ಲಿ ಕನಿಷ್ಠ 10 ಸೇವೆಗಳು ಮಾತ್ರ ಲಭ್ಯವಿರುತ್ತವೆ. ಈ ಸೇವೆ ವೇಗವನ್ನು ಪಡೆದ ನಂತರ ಈ ಸಂಖ್ಯೆಯನ್ನು 30 ಕ್ಕೆ ಹೆಚ್ಚಿಸಲಾಗುವುದು. ಸಾಮಾನ್ಯ ಬ್ಯಾಂಕ್ ಶಾಖೆಗಳಿಗಿಂತ ಭಿನ್ನವಾಗಿ, DBUಗಳು ಕಾಗದರಹಿತ ಸೇವೆಗಳಾಗಿರುತ್ತವೆ. ಇವುಗಳನ್ನು ಬ್ಯಾಂಕಿನ ಶಾಖೆಗಳಾಗಿ ಪರಿಗಣನೆ ಮಾಡಲಾಗುವುದಿಲ್ಲ. ಆದರೆ ವಿಶೇಷ ಡಿಜಿಟಲ್ ಘಟಕಗಳಾಗಿ ಪರಿಗಣಿಸಲಾಗುವುದು.


ಹಣಯಂತ್ರದಲ್ಲಿ ಠೇವಣಿ


DBU ನಲ್ಲಿ ಠೇವಣಿಯನ್ನು ಮಾಡಲು ಹಣವನ್ನು ಸ್ವೀಕರಿಸಲಾಗುವುದಿಲ್ಲ. ಎಟಿಎಂಗಳು ಮತ್ತು ನಗದು ಠೇವಣಿ ಯಂತ್ರಗಳ ಸಹಾಯದಿಂದ, ಹಿಂಪಡೆಯುವಿಕೆ ಮತ್ತು ಠೇವಣಿ ಮಾಡಲು ಅವಕಾಶ ಇರುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್ ಕಿಯೋಸ್ಕ್, ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ ಅಂದರೆ NEFT, ತಕ್ಷಣದ ಪಾವತಿ ಸೇವೆ ಅಂದರೆ IMPS, KYC ಅಂದರೆ ಗ್ರಾಹಕರ ನವೀಕರಣಗಳು, ದೂರು ನೋಂದಣಿ ಹಾಗೂ ಖಾತೆ ತೆರೆಯುವ ಕಿಯೋಸ್ಕ್‌ ನಂತಹ ಸೌಲಭ್ಯಗಳೂ ಇಲ್ಲಿ ಇರುತ್ತವೆ ಎಂದು ಮೂಲಗಳು ತಿಳಿಸಿವೆ.


ಈ DBU ಗಳು, ವಿಶೇಷವಾಗಿ ಬ್ಯಾಂಕುಗಳು, ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಸೇರಿದಂತೆ ಹಲವಾರು ಸರ್ಕಾರಿ ಯೋಜನೆಗಳಿಗೆ ಗ್ರಾಹಕರ ಡಿಜಿಟಲ್ ಆನ್‌ಬೋರ್ಡಿಂಗ್ ಅನ್ನು ಖಚಿತಪಡಿಸುತ್ತದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top