ಬಾಲಿವುಡ್ ಗಲ್ಲಾ ಪೆಟ್ಟಿಗೆ ಲೂಟಿ ಹೊಡೆಯುತ್ತಿರೋ ಕಾಂತಾರ; ನಾಲ್ಕನೇ ದಿನ ₹1.5 ಕೋಟಿ ಗಳಿಕೆ

Upayuktha
0

ಆಯುಷ್ಮಾನ್ ಖುರಾನಾ ಅವರ ಬಾಲಿವುಡ್ ಚಲನಚಿತ್ರವು 4 ನೇ ದಿನದಂದು ಗಳಿಸಿದ ಆದಾಯದಂತೆಯೇ, ಹಿಂದಿ ಆವೃತ್ತಿ ಕಾಂತಾರ ಸಿನಿಮಾ ಸೋಮವಾರ ಸುಮಾರು ₹ 1.5 ಕೋಟಿ ರೂ. ಸಂಗ್ರಹಿಸಿದೆ.


ಕನ್ನಡ ಚಲನಚಿತ್ರ ಕಾಂತಾರದ ಹಿಂದಿ ಆವೃತ್ತಿಯು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆಯುಷ್ಮಾನ್ ಖುರಾನಾ ಅವರ ಚಲನಚಿತ್ರ ಡಾಕ್ಟರ್ ಜಿಗೆ ಸಮಾನವಾದ ಆದಾಯವನ್ನು ಗಳಿಸಿದೆ. ಸುಮಾರು ₹ 1.5 ಕೋಟಿ. ಆದಾಯವನ್ನು ಒಂದೇ ದಿನದಲ್ಲಿ ಕಲೆಹಾಕಿದೆ. ನಾಲ್ಕು ದಿನ ಒಟ್ಟು ₹ 9 ಕೋಟಿ ಮೊತ್ತವನ್ನು ಬಾಚಿಕೊಂಡಿದೆ. ಈ ಸಿನಿಮಾ ಭಾರತದಾದ್ಯಂತ 800ಕ್ಕೂ ಅಧಿಕ ತೆರೆಗಳಲ್ಲಿ ಬಿಡುಗಡೆಗೊಂಡಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಚಿತ್ರವನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.


ದಕ್ಷಿಣ ಕನ್ನಡದ ಕಾಲ್ಪನಿಕ ಹಳ್ಳಿಯ ಕಥಾ ಹಂದರವನ್ನು ಕಾಂತಾರ ಸಿನಿಮಾ ಒಳಗೊಂಡಿದೆ. ಕಂಬಳ, ದೈವಾರಾಧನೆಯ ವೈಭವ ಅದ್ಭುತವಾಗಿ ಮೂಡಿಬಂದಿದೆ. ಅರಣ್ಯ ಅಧಿಕಾರಿಯಾಗಿ ಕಿಶೋರ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದರಲ್ಲಿ ಅಚ್ಯುತ್ ಕುಮಾರ್ ಮತ್ತು ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


Boxofficeindia.com ಪ್ರಕಾರ, ಸೋಮವಾರದಂದು ಕಾಂತಾರ (ಹಿಂದಿ) ₹1.25-1.50 ಕೋಟಿ ರೂ. ಆದಾಯ ಗಳಿಸಿದೆ. ಸಿನಿಮಾವು ಶುಕ್ರವಾರದಂದು ಬಿಡುಗಡೆಯಾದಾಗಿನಿಂದ 40-50 ಪ್ರತಿಶತದಷ್ಟು ಆದಾಯ ಸಂಗ್ರಹ ಬೆಳವಣಿಗೆಯಾಗಿದೆ. ಕನ್ನಡದಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿದೆ. ತೆಲುಗು ಆವೃತ್ತಿಯು ಅಕ್ಟೋಬರ್ 15 ರಂದು ತೆರೆಗೆ ಬಂದಿತು. ಚಿತ್ರವು ಈಗಾಗಲೇ ವಿಶ್ವಾದ್ಯಂತ ₹100 ಕೋಟಿ ಗಳಿಸಿದೆ.


ಹೊಂಬಾಳೆ ಫಿಲಂಸ್‌ ನಿರ್ಮಾಪಕ ವಿಜಯ್ ಕಿರಗಂದೂರು ಮುಂಬರುವ ವಾರಗಳಲ್ಲಿ ಕಾಂತಾರವನ್ನು ಇನ್ನಷ್ಟು ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಹೇಳಿದ್ದಾರೆ. "ನಾವು ಹೆಮ್ಮೆಪಡುವ ನಮ್ಮ ವಿಶಿಷ್ಟ ಸಾಂಸ್ಕೃತಿಕ ಬದುಕನ್ನು ಜಗತ್ತು ನೋಡಬೇಕೆಂದು ನಾವು ಬಯಸಿದ್ದೇವೆ. ಈ ಚಲನಚಿತ್ರವು ಕರಾವಳಿ ಕರ್ನಾಟಕದ ಅನನ್ಯವಾದ ಆಕರ್ಷಕ ಭೂದೃಶ್ಯಗಳ ಹಿನ್ನೆಲೆಯೊಂದಿಗೆ ಪವಿತ್ರ ಸಂಪ್ರದಾಯಗಳು, ನಂಬಿಕೆ, ಆಚರಣೆಗಳನ್ನು ಒಳಗೊಂಡಿದೆ" ಎಂದು ಅವರು ತಿಳಿಸಿದ್ದಾರೆ.


ನಟ ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಅವರು ತಮ್ಮ ಬ್ಯಾನರ್ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮೂಲಕ ಶೀಘ್ರದಲ್ಲೇ ಕಾಂತಾರದ ಮಲಯಾಳಂ ಆವೃತ್ತಿಯನ್ನು ಕೇರಳದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ 'ಆರಂಭದಲ್ಲಿ, ನಾವು ಚಿತ್ರವನ್ನು ಬೇರೆ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿರಲಿಲ್ಲ. ಒಟಿಟಿಯಲ್ಲಿ ಚಿತ್ರ ಬಂದಾಗ ನಾವು ಡಬ್ ಮಾಡುತ್ತೇವೆ ಎಂದು ನಿರ್ಧರಿಸಿದ್ದೆವು. ಆದರೆ ಕರ್ನಾಟಕದ ಹೊರಗೆ ಕನ್ನಡ ಆವೃತ್ತಿಗೆ ದೊರಕಿದ ಭವ್ಯ ಸ್ವಾಗತವನ್ನು ನೋಡಿದ ನಂತರ, ವಿತರಕರು ನಮ್ಮನ್ನು ಸಂಪರ್ಕಿಸಿದರು ಮತ್ತು ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಲು ಆಸಕ್ತಿ ತೋರಿದರು. ಈ ಮೂಲಕ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಕಾಂತಾರ ಸಿನಿಮಾ ಬಿಡುಗಡೆಗೊಂಡಿದೆ" ಎಂದಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top