ಸೆ.25: ಮಂಗಳೂರು ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ಯುವ ಸಂಗೀತೋತ್ಸವ-2022

Upayuktha
0





ಮಂಗಳೂರು:
ಸಂಗೀತ ಪರಿಷತ್ ಮಂಗಳೂರು (ರಿ) ಆಶ್ರಯದಲ್ಲಿ, ಕನ್ನಡ & ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಭಾರತೀಯ ವಿದ್ಯಾಭವನ ಮಂಗಳೂರು ಇವರ ಸಹಯೋಗದೊಂದಿಗೆ ಸೆ. 25 ರಂದು ಭಾನುವಾರ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ "ಯುವ ಸಂಗೀತೋತ್ಸವ" ಕಾರ್ಯಕ್ರಮ ನಡೆಯಲಿದೆ.

ದಿನ ಪೂರ್ತಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪೂರ್ವಾಹ್ನ 10 ರಿಂದ ಸಂಜೆ 4.30ರ ವರೆಗೆ ಸ್ಥಳೀಯ ಯುವ ಪ್ರತಿಭೆಗಳಾದ ಹರ್ಷಿತ್ ಕುಮಾರ್ ಸುರತ್ಕಲ್, ಶೋಭಿತಾ ಭಟ್ & ಆಶ್ವೀಜಾ ಉಡುಪ ಕಿನ್ನಿಗೋಳಿ, ಅಭಿಷೇಕ್ ಮಂಗಳೂರು ಹಾಗೂ ಸರ್ವೇಶ್ ದೇವಸ್ಥಳಿ ಉಜಿರೆ ಸಂಗೀತ ಕಛೇರಿ ನೀಡಲಿದ್ದಾರೆ. ಇವರಿಗೆ ಪಿಟೀಲಿನಲ್ಲಿ ಮಂಗಳೂರಿನ ಧನಶ್ರೀ ಶಭರಾಯ ಹಾಗೂ ಗೌತಮ್ ಭಟ್, ಮೃದಂಗದಲ್ಲಿ ಅವನೀಶ್ ಬೆಳ್ಳಾರೆ ಮತ್ತು ಪವನ್ ಪುತ್ತೂರು ಸಹಕರಿಸಲಿದ್ದಾರೆ. 5 ಗಂಟೆಗೆ ಸರಿಯಾಗಿ ಪ್ರಧಾನ ಕಛೇರಿ ಹರಿಪ್ರಸಾದ್ ಸುಬ್ರಮಣಿಯನ್ ಕೊಚ್ಚಿ ಇವರಿಂದ ಕೊಳಲು ವಾದನ.

ಇವರಿಗೆ ವೈಭವ ರಮಣಿ ಬೆಂಗಳೂರು ಪಿಟೀಲು, ಹರಿಹರನ್ ಸುಂದರರಾಮನ್ ಚೆನೈ ಮೃದಂಗ, ಸುಮುಖ ಕಾರಂತ ಮಂಗಳೂರು ಖಂಜೀರ ಪಕ್ಕವಾದ್ಯ ನೀಡಲಿದ್ದಾರೆ. ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶವಿದೆ.

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top