ಸೆ. 15ರಂದು ಸಾಧಕರಿಗೆ ಬಸವನಗುಡಿ ವಿಪ್ರರತ್ನ ಪ್ರಶಸ್ತಿ ಪ್ರದಾನ

Upayuktha
0

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಂಗ ಸಂಸ್ಥೆಯಾದ ಬಸವನಗುಡಿ ಬ್ರಾಹ್ಮಣ ಮಹಾಸಭಾ ವತಿಯಿಂದ ಸೆಪ್ಟೆಂಬರ್ 15 ಗುರುವಾರ ಸಂಜೆ 5:00 ಗಂಟೆಗೆ ಎನ್ ಆರ್ ಕಾಲೋನಿ ಡಾ. ಸಿ ಅಶ್ವತ್ ಕಲಾಭವನದಲ್ಲಿ ಜ್ಯೋತಿ ಸಮೂಹ ಸಂಸ್ಥೆಗಳ ಟ್ರಸ್ಟಿ ಎಂ. ನರಸಿಂಹನ್, ಸಂಸ್ಕೃತಿ ಚಿಂತಕ ಡಾ ಗುರುರಾಜ ಪೋಶೆಟ್ಟಿಹಳ್ಳಿ, ಮತ್ತು ಪ್ರಥಮ ರಾಂಕ್ ಚಿನ್ನದ ಪದಕ ವಿಜೇತ ವೈದ್ಯೆ ಡಾ.ಸಂಜನ ಕುಮಾರ್ ರವರಿಗೆ ಬಸವನಗುಡಿ ವಿಪ್ರ ರತ್ನ ಪ್ರಶಸ್ತಿ  ಪ್ರದಾನ ಸಮಾರಂಭ ನಡೆಯಲಿದೆ.


ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಎಲ್.ಎಸ್ ತೇಜಸ್ವಿ ಸೂರ್ಯ, ಬಸವನಗುಡಿ ಶಾಸಕ ರವಿ ಸುಬ್ರಮಣ್ಯ, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಮಹಿಳಾ ವಿಭಾಗದ ರಾಜ್ಯ ಸಂಚಾಲಕಿ ಡಾ. ಶುಭಮಂಗಳ ಸುನಿಲ್ ಭಾಗವಹಿಸುವರು.


ಬಸವನಗುಡಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್ ಆರ್ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನ ಬಸವನಗುಡಿ ಕ್ಷೇತ್ರದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳಾದ ಉಪಾಧ್ಯಕ್ಷ ಡಿ.ವಿ ರಾಜೇಂದ್ರ ಪ್ರಸಾದ್, ಹೆಚ್. ಆರ್ ಸುರೇಶ್, ಸಹಕಾರ್ಯದರ್ಶಿ ಹೆಚ್.ಸಿ ಪುರುಷೋತ್ತಮ್, ಟಿ.ಎಲ್‌.ಎಸ್‌ ಕುಮಾರ್, ಆರ್. ರವಿಕುಮಾರ್ ರವರುಗಳಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ಬಸವನಗುಡಿ ಬ್ರಾಹ್ಮಣ ಮಹಾಸಭಾ ಕಾರ್ಯಾಧ್ಯಕ್ಷ ಟಿ.ಎಸ್ ಸುಬ್ರಹ್ಮಣ್ಯ, ಉಪಾಧ್ಯಕ್ಷ ಬಿ ಎನ್.ಜಯಸಿಂಹ, ಖಜಾಂಚಿ ಪ್ರೊ. ಕೆ.ವಿ ಮುರುಳಿಧರ ಶರ್ಮ, ಮಹಿಳಾ ವಿಭಾಗದ ಅಧ್ಯಕ್ಷೆ ವೈಜಯಂತಿ ಎಂ ಶರ್ಮ, ಯುವ ವಿಭಾಗದ ಅಧ್ಯಕ್ಷ ಕೆ.ಎನ್ ರಾಘವೇಂದ್ರ ವಶಿಷ್ಠ ಉಪಸ್ಥಿತರಿವರು ಎಂದು ಪ್ರಧಾನ ಕಾರ್ಯದರ್ಶಿ ರಥಯಾತ್ರೆ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top