ಜಿಲ್ಲಾ ಮಟ್ಟದ ಜನಪದ ಗೀತ ಗಾಯನ ಸ್ಪರ್ಧೆ: ನಡ ಪಿಯು ಕಾಲೇಜು ವಿದ್ಯಾರ್ಥಿನಿಗೆ ದ್ವಿತೀಯ ಸ್ಥಾನ
ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ದ. ಕ. ಜಿಲ್ಲಾಮಟ್ಟದ ಬುಲ್ ಬುಲ್, ಗೈಡ್ಸ್ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಹಾಗೂ ಗೊ.ರು. ಚನ್ನಬಸಪ್ಪ ರೇಂಜರ್ಸ್ ಜನಪದ ಗೀತ ಗಾಯನ ಸ್ಪರ್ಧೆಯು ಸೆ. 19ರಂದು ಮಂಗಳೂರಿನಲ್ಲಿ ನಡೆಯಿತು. ಜಿಲ್ಲಾ ಮಟ್ಟದ ರೇಂಜರ್ ವಿಭಾಗದ ಜನಪದ ಗೀತೆ ಸ್ಪರ್ಧೆಯಲ್ಲಿ ಸರಕಾರೀ ಪದವಿ ಪೂರ್ವ ಕಾಲೇಜು ನಡ ಇಲ್ಲಿನ ರೇಂಜರ್ ವಿದ್ಯಾರ್ಥಿನಿ ಕುಮಾರಿ ಸವಿತಾ ಇವಳು ದ್ವಿತೀಯ ಸ್ಥಾನವನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾಳೆ. ರೇಂಜರ್ ಲೀಡರ್ ಶ್ರೀಮತಿ ವಸಂತಿ ಪಿ. ಹಾಗೂ ಕನ್ನಡ ಉಪನ್ಯಾಸಕಿ ಶ್ರೀಮತಿ ಲಿಲ್ಲಿ ಮೇಡಂ ಮಾರ್ಗದರ್ಶನ ನೀಡಿದರು.
ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ನಡ ಪಿಯು ಕಾಲೇಜು ಬಾಲಕಿಯರಿಗೆ ದ್ವಿತೀಯ ಸ್ಥಾನ
ಬೆಳ್ತಂಗಡಿ: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಸರಕಾರೀ ಪದವಿ ಪೂರ್ವ ಕಾಲೇಜು ನಡದ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಕ್ರೀಡಾ ಮಾರ್ಗದರ್ಶಿಯಾಗಿ ಶ್ರೀಮತಿ ವಸಂತಿ ಪಿ. ಕಾರ್ಯ ನಿರ್ವಹಿಸಿದರು. ಕ್ರೀಡಾ ತರಬೇತುದಾರ ಶ್ರೀ ಹರ್ಷ ತರಬೇತಿ ನೀಡಿದ್ದರು. ಪ್ರಾಂಶುಪಾಲರು ಹಾಗೂ ಎಲ್ಲಾ ಉಪನ್ಯಾಸಕರು ಸಹಕರಿಸಿದರು.
ತಾಲೂಕು ಮಟ್ಟದ ಬಾಲಕಿಯ ಖೋ ಖೋ ಪಂದ್ಯಾಟ: ನಡ ಪಿಯು ಕಾಲೇಜು ವಿದ್ಯಾರ್ಥಿನಿಯರಿಗೆ ದ್ವಿತೀಯ ಸ್ಥಾನ
ಬೆಳ್ತಂಗಡಿ: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಸರಕಾರೀ ಪದವಿ ಪೂರ್ವ ಕಾಲೇಜು ನಡದ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಕ್ರೀಡಾ ಮಾರ್ಗದರ್ಶಿಯಾಗಿ ಶ್ರೀಮತಿ ವಸಂತಿ ಪಿ. ಕಾರ್ಯ ನಿರ್ವಹಿಸಿದರು. ಕ್ರೀಡಾ ತರಬೇತುದಾರ ಶ್ರೀ ಹರ್ಷ ತರಬೇತಿ ನೀಡಿದ್ದರು. ಪ್ರಾಂಶುಪಾಲರು ಹಾಗೂ ಎಲ್ಲಾ ಉಪನ್ಯಾಸಕರು ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ