ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ: ಉಜಿರೆ ವಿದ್ಯಾರ್ಥಿನಿ ಪ್ರಥಮ ರ್‍ಯಾಂಕ್

Upayuktha
0

 


ಉಜಿರೆ: ಎನ್.ಸಿ.ಇ.ಆರ್.ಟಿ. ನಡೆಸಿದ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಉಜಿರೆಯ ಕುಮಾರಿ ದೀಕ್ಷಾ, ಬಿ.ಎಸ್. ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ.


ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಆರ್.ಐ.ಇ.)ಯಲ್ಲಿ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ (ಎಂ.ಎಸ್‍ಸಿ.ಎಡ್) ಇವರು ಆಯ್ಕೆಯಾಗಿದ್ದಾರೆ.


ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸಂಸ್ಕøತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಭಟ್ ಮತ್ತು ಉಜಿರೆಯ ಸರ್ಕಾರಿ ಪ್ರೌಢಶಾಲಾ ಗಣಿತ ಶಿಕ್ಷಕಿ ವೀಣಾ ಶ್ಯಾನ್‍ಭಾಗ್ ದಂಪತಿಯ ಮಗಳು.


ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆ ಮತ್ತು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿದ್ದಾರೆ.


إرسال تعليق

0 تعليقات
إرسال تعليق (0)
To Top