ಸೆ. 26ರಂದು 'ಐಸಬಾಸ್' ತುಳು ಆಲ್ಬಂ ಸಾಂಗ್ ಬಿಡುಗಡೆ

Upayuktha
0

ಮಂಗಳೂರು: ವಿವಾನ್ ಪ್ರೊಡಕ್ಷನ್ ಅರ್ಪಿಸುವ ವಿದ್ಯಾ ವೇಣುಗೋಪಾಲ್ ಆಚಾರ್ಯ ನಿರ್ಮಿಸಿರುವ ಚೇತನ್.ಕೆ.ವಿಟ್ಲ ನಿರ್ದೇಶನ, ರಾಗಸಂಯೋಜನೆ, ಸಾಹಿತ್ಯ ನೀಡಿರುವ ಅಚಲ್ ವಿಟ್ಲ ಸಹನಿರ್ದೇಶನದ, ಅಶ್ವಿನ್ ಬಾಬಣ್ಣ ಸಂಗೀತ ನೀಡಿರುವ, ಭವಾನಿಶಂಕರ್ ಗಾಯನದ, ಸಂಕಲನ ಮತ್ತು ಛಾಯಾಗ್ರಹಣವನ್ನು ಬಾತ್ ಕುಲಾಲ್ ಅವರು ನಿರ್ವಹಿಸಿರುವ, ಎಂ.ಜಿ.ಕೆ ಶಿಲ್ಪಕಲಾ ತಂಡ ಅಭಿನಯಿಸಿರುವ ತುಳು ಆಲ್ಬ್ಂ ಹಾಡು ಐಸಬಾಸ್  ಸೆಪ್ಟೆಂಬರ್ 26 ರಂದು V4 Vaishu ಕ್ರಿಯೆಷನ್ಸ್ ಚಾನೆಲ್ ನಲ್ಲಿ ಕನ್ನಡದ ಲೆಜೆಂಡ್ ಸಂಗೀತ ನಿರ್ದೇಶಕರೊಬ್ಬರಿಂದ ಬಿಡುಗಡೆಯಾಗಲಿದೆ.


ತುಳು ಭಾಷೆಯಲ್ಲಿ ಹೊಸತನವನ್ನು ತರುವಲ್ಲಿ ಈ ತಂಡ ಪ್ರಯತ್ನಿಸುತ್ತಿದ್ದು, ಅದರಂತೆ ಐಸಬಾಸ್ ಮೋಟಿವೇಷನಲ್ ಆಲ್ಬಮ್ ಸಾಂಗ್ ಆಗಿದ್ದರೂ ಸಂಪೂರ್ಣ ಹಾಸ್ಯ ಸನ್ನಿವೇಶಗಳಿಂದ ಕೂಡಿ ಪ್ರೇಕ್ಷಕರನ್ನು ರಂಜಿಸಲಿದೆ. ಇದರಲ್ಲಿ ವಿಶೇಷ ಅಂದ್ರೆ ಐಸಬಾಸ್ ಹಾಡನ್ನು ಸೆಟ್ ಹಾಕಿ ಚಿತ್ರೀಕರಿಸಿರುವುದು ತುಳು ಆಲ್ಬಮ್ ಸಾಂಗ್ ಲೋಕದಲ್ಲಿ ಅಪರೂಪದ ಪ್ರಯತ್ನ ಎಂದರೆ ತಪ್ಪಾಗಲಾರದು.


ಈ ಆಲ್ಬಂ ಸಾಂಗ್ ನ ಶೀರ್ಷಿಕೆಯನ್ನು ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಬಿಡುಗಡೆ ಮಾಡಿದ್ದು, ಪೋಸ್ಟರನ್ನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಬಿಡುಗಡೆಗೊಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top