ಪ್ರತಿಷ್ಠಿತ "ಪುವೆಂಪು ಸಮ್ಮಾನ್‌"ಗೆ ಗಾಯಕ ರಮೇಶ್ಚಂದ್ರ ಆಯ್ಕೆ, ಅ.10ರಂದು ಪ್ರದಾನ

Upayuktha
0

ಕುಂಬಳೆ: ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷ, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಜಯಂತಿ ಪ್ರಯುಕ್ತ ತುಳುವರ್ಲ್ಡ್ ಮಂಗಳೂರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪುವೆಂಪು ಅಭಿಮಾನಿಗಳು ಆಯೋಜಿಸುವ "ಪುವೆಂಪು ನೆಂಪು 2022" ಕಾರ್ಯಕ್ರಮದಲ್ಲಿ ಪ್ರತಿಷ್ಠಿತ "ಪುವೆಂಪು ಸಮ್ಮಾನ್‌"ಗೆ ಖ್ಯಾತ ಹಿನ್ನಲೆ ಗಾಯಕ, ದ್ವಿಬಾರಿ ರಾಜ್ಯ ಪ್ರಶಸ್ತಿ ಗಳಿಸಿಕೊಂಡಿರುವ ರಮೇಶ್ಚಂದ್ರ ಆವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನಾ ಸಮಿತಿ ತಿಳಿಸಿದೆ.


10 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡ ಪ್ರಶಸ್ತಿಯನ್ನು ಅ.10ಕ್ಕೆ ಅನಂತಪುರದಲ್ಲಿ ಜರಗುವ ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು, ಹಾಗೂ ವಿವಿಧ ಇಲಾಖೆ, ಜನಪ್ರತಿನಿದಿಗಳು, ಸಾಹಿತ್ಯ, ಸಾಂಸ್ಕೃತಿಕ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನಿಸಲಾಗುತ್ತದೆ. ವರ್ಷಂಪ್ರತಿ ನಡೆಯುವ ಪುವೆಂಪು ನೆಂಪು ಕಾರ್ಯಕ್ರಮದಲ್ಲಿ ಪುವೆಂಪು ಸಮ್ಮಾನ್ ಪ್ರದಾನಿಸಲಾಗಿದ್ದು ಕಳೆದ ಬಾರಿ ಗಾಯಕ ಕೃಷ್ಣ ಕಾರಂತ್ ಅವರಿಗೆ ನೀಡಲಾಗಿತ್ತು.


ಪುಣಿಂಚಿತ್ತಾಯರ ಬದುಕು ಬರಹಗಳನ್ನು ಅನಾವರಣಗೊಳಿಸುವುದರೊಂದಿಗೆ ಹೊಸ ತಲೆಮಾರಿಗೆ ಇದನ್ನು ತಿಳಿಯಪಡಿಸುವಲ್ಲಿ ಸಫಲರಾಗುತ್ತಿರುವವರನ್ನು ಪ್ರೋತ್ಸಾಹಿಸಲು ಪುವೆಂಪು ಸಮ್ಮಾನ್ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಖ್ಯಾತ  ಗಾಯಕರಾಗಿರುವ ರಮೇಶ್ಚಂದ್ರ ಅವರು ಮೂಲತಃ ಕಾಸರಗೋಡಿನವರಾಗಿದ್ದು ಇದೀಗ ಬೆಂಗಳೂರಿನಲ್ಲಿ ಚಲನಚಿತ್ರ ಹಿನ್ನಲೆ ಗಾಯಕರಾಗಿ ಪ್ರಸಿದ್ಧರಾಗಿದ್ದಾರೆ.


ಕಳೆದ ಬಾರಿ ಮಂಗಳೂರಿನಲ್ಲಿ 101 ಕವಿಗಳ ತುಳು ಕವನ ಪ್ರಕಟಿಸಿ ವೆಂಕಟರಾಜ ಪುಣಿಂಚಿತ್ತಾಯರಿಗೆ ಸಮರ್ಪಿಸಿ ಬರೆಯಲು ಅವಕಾಶ ನೀಡಿದ್ದಲ್ಲದೆ  ರಾಗ ಸಂಯೋಜಿಸಿ ತುಳುವರಿಗೆ ಉತ್ತಮ  ಹಾಡುಗಳ ಕೊರತೆಯನ್ನು ನೀಗಿಸಿ ಈ ಹಾಡುಗಳನ್ನು ಜಗತ್ಪ್ರಸಿದ್ಧಗೊಳಿಸಿದ್ದಾರೆ. ರಮೇಶ್ಚಂದ್ರ ಅವರು 'ಪುವೆಂಪು ನೂತೊಂಜಿ ನೆಂಪು" ಎಂಬ ವಿಭಿನ್ನ ಕಾರ್ಯಕ್ರಮ ಆಯೋಜಿಸಿ ಅದರಲ್ಲಿ ಪುಸ್ತಕ  ಬಿಡುಗಡೆಗೊಳಿಸಿ ಜನ ಮನ್ನಣೆಗೆ ಪಾತ್ರರಾಗಿದ್ದರು. ನಾಡಿನ ನಾನಾ ತುಳು ಕನ್ನಡ ಸಾಹಿತಿಗಳಿಗೆ, ಗಾಯಕರಿಗೆ, ಸಂಘಟಕರಿಗೆ, ಅವಕಾಶ ನೀಡಿದ್ದಲ್ಲದೆ. ತನ್ನ ಟೀಮ್ ಐಲೇಸಾ ಎಂಬ ತಂಡದ ಮೂಲಕ ದೇಶ ವಿದೇಶದಲ್ಲಿ ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಸಾಹಿತ್ಯಗಳನ್ನು ಪ್ರಸ್ತುತಪಡಿಸುವಲ್ಲಿ ರಮೇಶ್ಚಂದ್ರ ಪ್ರಧಾನ ಪಾತ್ರವಹಿಸಿರುವುದಕ್ಕಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top