ಬೆಂಗಳೂರು: ನಗರದ ಬಸವನಗುಡಿ ನ್ಯಾಷನಲ್ ಕಾಲೇಜಿನ ಡಾ.ಎಚ್ ಎನ್ ಮಲ್ಟಿಮೀಡಿಯ ಸಭಾಂಗಣದಲ್ಲಿ ಶ್ರೀ ಅರಬಿಂದೋ ಕಪಾಲಿ ಶಾಸ್ತ್ರಿ ವೇದ ಸಂಸ್ಕೃತಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ವೇದ ಸೌರಭ ಸಮಾರಂಭದಲ್ಲಿ ಟಿ ವಿ ಕಪಾಲಿ ಶಾಸ್ತ್ರಿರವರ 136 ನೇ ಜನ್ಮ ದಿನೋತ್ಸವದ ಅಂಗವಾಗಿ ಸಂಸ್ಕೃತಿ ಚಿಂತಕ, ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ಮತ್ತು ಕವಯತ್ರಿ, ಚಿಂತಕಿ ಡಾ. ಉಷಾರಾಣಿ ರಾವ್ ರವರಿಗೆ ಟಿ ವಿ ಕಪಾಲಿ ಶಾಸ್ತ್ರಿ ಪ್ರಶಸ್ತಿಯನ್ನು ಬೇಲಿ ಮಠದ ಪೂಜ್ಯ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿಗಳು ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಆರ್. ಎಲ್. ಕಶ್ಯಪ, ಹಿರಿಯ ವೈದ್ಯೆ ಡಾ. ವಿಜಯಲಕ್ಷ್ಮಿ ದೇಶಮಾನೆ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಕ್ಷಿ ಸಂಸ್ಥೆಯ ಆಡಳಿತ ಟ್ರಸ್ಟಿ ಡಾ.ರ.ವಿ ಜಹಾಗೀರದಾರ ಮಾತನಾಡುತ್ತಾ ರಜತ ಮಹೋತ್ಸವದ ಸಂಭ್ರಮದಲ್ಲಿರುವ ಸಾಕ್ಷಿ ವೇದಗಳ ಮತ್ತು ಶ್ರೀ ಅರಬಿಂದೋ ಅವರ ವಿಚಾರಧಾರೆಯನ್ನು ಸಾರುತ್ತ ವೇದ ಪರಂಪರೆಯ ಘನತೆಯನ್ನು ಎತ್ತಿ ಹಿಡಿದ ವಿದ್ವಾಂಸರನ್ನು ಗೌರವಿಸುವುದರ ಮೂಲಕ ಈ ಪರಂಪರೆಗೆ ಪೋಷಣೆ ನೀಡುವುದು ಈ ಸನ್ಮಾನದ ಹಿಂದಿನ ಉದ್ದೇಶವಾಗಿದೆ ಎಂದು ತಿಳಿಸಿದರು.