ಬದಿಯಡ್ಕ: ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು, ಶ್ರೀಸಂಸ್ಥಾನಗೋಕರ್ಣ ಇವರ ದಿವ್ಯಾನುಗ್ರಹದ ಮುಳ್ಳೇರಿಯ ಮಂಡಲಾಂತರ್ಗತ ಪಳ್ಳತ್ತಡ್ಕ ಹವ್ಯಕ ವಲಯದ ಸೆಪ್ಟಂಬರ್ ತಿಂಗಳ ವಲಯ ಸಭೆಯು ಬದಿಯಡ್ಕದಲ್ಲಿರುವ ಉದನೇಶ ಕುಂಬಳೆ ಇವರ ಮನೆ ಧನ್ಯೋಸ್ಮಿ ಯಲ್ಲಿ ಸೆಪ್ಟಂಬರ್ 4ರಂದು ಜರಗಿತು.
ಧ್ವಜಾರೋಹಣ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಆರಂಭವಾಯಿತು. ವಲಯ ಅಧ್ಯಕ್ಷ ಪರಮೇಶ್ವರ ಭಟ್ ಪೆರುಮುಂಡ ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ಗತಸಭೆಯ ವರದಿ ಮಂಡಿಸಿದರು. ಖಜಾಂಚಿ ನಾರಾಯಣ ಮೂರ್ತಿ ಗುಣಾಜೆ ಲೆಕ್ಕಪತ್ರ ಮಂಡಿಸಿದರು.
ಗುರುಕುಲ ಚಾತುರ್ಮಾಸ್ಯವು ಅಶೋಕೆ ಗೋಕರ್ಣದಲ್ಲಿ ಜುಲೈ 13ರಿಂದ ಸೆಪ್ಟಂಬರ್ 10ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಗುತ್ತಿದ್ದು ಶಿಷ್ಯಬಾಂಧವರು ಗರಿಷ್ಟ ಸಂಖ್ಯೆಯಲ್ಲಿ ಭಾಗವಹಿಸಿದ ವಿವರ ತಿಳಿಸಲಾಯಿತು. ವಲಯ ಭಿಕ್ಷೆಯು ಸೆಪ್ಟಂಬರ್ 7ರಂದು ಜರಗಲಿದ್ದು ಭಾಗವಹಿಸುವ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು.
ಚಿನ್ಮಯ ಮಿಷನ್ ಕಾಸರಗೋಡಿನಲ್ಲಿ 17.09.22ರಂದು 'ಸೌಂದರ್ಯಲಹರಿ' ತರಬೇತಿ ಜರಗಲಿದ್ದು ಭಾಗವಹಿಸಲು ತಿಳಿಸಲಾಯಿತು. ಮಾಣಿಮಠದಲ್ಲಿ ಗರ್ಭಗುಡಿಯ ಶ್ರಮದಾನ ಬಗ್ಗೆ ತಿಳಿಸಲಾಯಿತು. ಚಾತರ್ಮಾಸ್ಯ ಸಂದರ್ಭದಲ್ಲಿ ವಲಯದ ವತಿಯಿಂದ 14 ಸಪ್ತಶತಿ ಪಾರಾಯಣ ಸೇವೆ ಸಂದಿರುವುದಾಗಿ ತಿಳಿಸಲಾಯಿತು.
ವಿವಿವಿ ಗುರುಕುಲಕ್ಕೆ ನಿತ್ಯ ಅಗತ್ಯಕ್ಕಿರುವ ಅಕ್ಕಿಯನ್ನು ವಲಯದಿಂದ ಸಂಗ್ರಹವಾದ ಮೊತ್ತದಿಂದ ಅಕ್ಕಿ ಸಮರ್ಪಣೆಯನ್ನು ಚಾತುರ್ಮಾಸ್ಯ ಸಂದರ್ಭದಲ್ಲಿ ಮಾಡುವುದಾಗಿ ತೀರ್ಮಾನಿಸಲಾಯಿತು. ಮುಷ್ಟಿಅಕ್ಕಿಯ ಸಂಗ್ರಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ಘಟಕದ ಸಂಪರ್ಕಿಸುವಂತೆ ಚರ್ಚಿಸಲಾಯಿತು. ರಾಮತಾರಕ ಮಂತ್ರ, ಶಾಂತಿ ಮಂತ್ರ, ಧ್ವಜಾವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ