ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿ. 2021-22 ನೇ ಸಾಲಿನಲ್ಲಿ 1.09 ಕೋಟಿ ಲಾಭ, ಶೇ 12 ಡಿವಿಡೆಂಡ್‌ ಘೋಷಣೆ: ಪ್ರಭಾಕರ ಪ್ರಭು

Upayuktha
0

ಬಂಟ್ವಾಳ: ತಾಲೂಕಿನ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು 2021-22  ನೇ ಸಾಲಿನಲ್ಲಿ 293.14 ಕೋಟಿ ವ್ಯವಹಾರ ನಡೆಸಿದ್ದು, 1.09 ಕೋಟಿ  ರೂ. ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ 12 ರಷ್ಟು ಡಿವಿಡೆಂಟ್  ಘೋಷಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು  ತಿಳಿಸಿದ್ದಾರೆ. ಈ ಕುರಿತಾಗಿ ಸಂಘದ 2021-22 ನೇ ಸಾಲಿನ ಮಹಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.

ಸಂಘದ ಬೆಳವಣಿಗೆ ಕುರಿತು ವಿವರಣೆ ನೀಡಿರುವ ಅವರು, ಸಂಘದ ಠೇವಣಿಯನ್ನು 39.49 ಕೋ.ರೂ.ಗೆ  ಹೆಚ್ಚಿಸಲಾಗಿದ್ದು,  62.86 ಕೋ.ರೂ. ಸಾಲ ಹೊರಬಾಕಿ ಇರುತ್ತದೆ, ಹೂಡಿಕೆ 6.27 ಕೋ.ರೂ.ನಿಂದ  9.49 ಕೋ.ರೂ.ಗೆ ಏರಿಕೆ ಕಂಡಿದ್ದು, ದುಡಿಯುವ ಬಂಡವಾಳ 48.68 ಕೋ.ರೂ.ನಿಂದ 77.92 ಕೋ.ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.


ಆಡಿಟ್ ವರ್ಗೀಕರಣದಲ್ಲಿಯು ‘ಎ’ ತರಗತಿ ಪಡೆದಿದ್ದು, 2021-22 ನೇ ಸಾಲಿನಲ್ಲಿ 275 ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿದ್ದು,2.22 ಕೋ.ರೂ.ಪಾಲು ಬಂಡವಾಳ ಜಮೆಯಾಗಿದೆ ಎಂದು ತಿಳಿಸಿದರು.


ಸಂಘದ ಸದಸ್ಯರ ಅವಶ್ಯಕತೆಗನುಗುಣವಾಗಿ ಒಟ್ಟು 68.55 ಕೋ.ರೂ. ಸಾಲ ವಿತರಿಸಲಾಗಿದೆ.ಈ ಪೈಕಿ 1687 ರೈತ ಸದಸ್ಯರಿಗೆ 32.09 ಕೋ.ರೂ. ಬೆಳೆಸಾಲ, 1054 ರೈತ ಸದಸ್ಯರಿಗೆ 36.46 ಕೋ.ರೂ.  ಕೃಷಿ ಅಭಿವೃದ್ದಿ ಸಾಲ ಸಹಿತ ಇನ್ನಿತರ ಸಾಲ ವಿತರಿಸಲಾಗಿದೆ ಎಂದು ವಿವರಿಸಿದ್ದಾರೆ.

ಸಭೆಯಲ್ಲಿ ಸದಸ್ಯರೊಬ್ಬರು ಸಾಲ ಮನ್ನಾ ಮೊಬಲಗು ಬಾರದಿರುವ ಬಗ್ಗೆ ವಿಷಯ ಪ್ರಾಸ್ಥಪಿಸಿರುವುದಕ್ಕೆ  ಬಾಕಿ ಉಳಿದ ಸಾಲ ಮನ್ನಾ ಶೀಘ್ರದಲ್ಲಿ ಬಿಡುಗಡೆಗೆ  ಸರಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.



ಬೇಳೆ ವಿಮೆ ಗರಿಷ್ಠ ಸಾಧನೆ

********

ಪ್ರಧಾನ ಮಂತ್ರಿ ಹವಾಮಾನ ಅದಾರಿತ ಬೇಳೆ ವಿಮೆ ಗರಿಷ್ಠ ಪ್ರಮಾಣದಲ್ಲಿ ಗುರಿ ಸಾಧನೆ

ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನ್ವಯ 1556 ಎಕ್ರೆ ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಸುಮಾರು ರೂ 41 ಲಕ್ಷ ಹಣವನ್ನು ರೈತರಿಂದ ಪ್ರೀಮಿಯಂ ಪಾವತಿಸಲಾಗಿದೆ.


ಸಂಘದ ವ್ಯಾಪ್ತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳ ಪ್ರತಿಭೆಗೆ ನಗದು ಸಹಾಯದೊಂದಿಗೆ ಪುರಸ್ಕಾರಿಸಲಾಯಿತು.


ಹೈನುಗಾರಿಕೆ ಹಾಗೂ ಕೋಳಿ ಸಾಕಾಣಿಕೆ ಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ 2 ಲಕ್ಷ ಸಾಲ ನೀಡಲಾಗುವುದು. 0.15 ಸೆನ್ಸ್ ಜಮೀನು ದಾರರಿಗೆ ಸಹ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿಕೆ. ಸಿದ್ದಕಟ್ಟೆ ಯಲ್ಲಿ ಕ್ಯಾಂಪ್ಕೋ ಶಾಖೆ ಪ್ರಾರಂಭಿಸಲು ಸಂಸ್ಥೆಯನ್ನು ಕೇಳಿಕೊಂಡು ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.


ಸಂಘದಲ್ಲಿ ಪಡಿತರ ಸಾಮಾಗ್ರಿ, ರಾಸಾಯನಿಕ ಗೊಬ್ಬರ, ಕೀಟನಾಶಕ, ಮೈಲುತುತ್ತು, ಸುಣ್ಣ, ಸೇರಿದಂತೆ ಇನ್ನಿತರ ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡಲಾಗುತ್ತಿದೆ. ಸಿದ್ಧಕಟ್ಟೆ ಪ್ರಧಾನ ಕಛೇರಿಯ ಬಳಿ ಎಮ್. ಎಸ್. ಸಿ. ಯೋಜನೆಯಡಿಯಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ಗೋದಾಮು ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಸಂಘದ ರಾಯಿ ಶಾಖಾ ಕಚೇರಿಯು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿದೆ. ಸಂಘದ ಆರಂಬೋಡಿ ಶಾಖೆ ಆರಂಬೊಡಿ ಗ್ರಾಮ ಪಂಚಾಯತ್ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ.

ಎರಡು ಶಾಖಾ ಕಛೇರಿಗಳು ಉತ್ತಮ ವ್ಯವಹಾರ ನಡೆಸುತ್ತಿವೆ.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಉಳಿಪಾಡಿ ಇವರ ಶಿಫಾರಸ್ಸು ಮೇರೆಗೆ ಕೃಷಿ ಇಲಾಖೆಯಿಂದ ಪಡೆದಿರುವ ಎರಡು ಟ್ರಾಕ್ಟರ್ ಗಳನ್ನು ಹಡಿಲು ಬಿದ್ದ ಗದ್ದೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಹಿರಿಯರ ಮಾರ್ಗದರ್ಶನ, ಸದಸ್ಯರ ಸಹಕಾರ ದಿಂದ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಮಹಾಸಭೆಯ ವರದಿ ವಾಚಿಸಿ, ವಿಷಯ ಮಂದಿಸಿದರು.

ಸಭೆಯಲ್ಲಿ ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ಆರ್. ಪುಜಾರಿ, ಅರಳ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಮಿಧರ ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಸಿದ್ದಕಟ್ಟೆ ಹಾಲು ಉತ್ಪದಕ ಸಹಕಾರಿ ಅಧ್ಯಕ್ಷ ಸದಾಶಿವ ಪೂವಳ, ಕರ್ಪೆ, ಪೂಂಜಾ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಾಕುಮಾರ್ ಚೌಟ, ಶ್ರೀರಾಮ ವಿದ್ಯಾ ಸಂಸ್ಥೆ ಸುಲ್ಕೆರಿ ಇದರ ಗೌರವ ಅಧ್ಯಕ್ಷ ಗಣೇಶ್ ಹೆಗ್ಡೆ, ಅಧ್ಯಕ್ಷ ರಾಜು ಪೂಜಾರಿ, ನಿವೃತ್ತ ಲೆಕ್ಕ ಪರಿಶೋಧಕ ಗೋಪಾಲ ರೈ, ಸಭೆಯಲ್ಲಿ ಭಾಗವಹಿಸಿದ್ದರು.


ಸಂಘದ ನಿರ್ದೇಶಕರಾದ ಮಂದಾರತಿ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರ ಬೆಟ್ಟು ಪ್ರತಿಭಾ ಪುರಸ್ಕಾರ ಪಟ್ಟಿ ವಾಚಿಸಿದರು. ಸಂಘದ ಸಹಾಯಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ದಿನೇಶ್ ಪೂಜಾರಿ ವಂದಿಸಿದರು.


ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷಸತೀಶ್ ಪೂಜಾರಿ ಅಲಕ್ಕೆ ನಿರ್ದೇಶಕರಾದ ಸಂದೇಶ್ ಶೆಟ್ಟಿ ಪೊಡುಂಬ,  ಹರೀಶ್ ಆಚಾರ್ಯ ರಾಯಿ, ಉಮೇಶ್ ಗೌಡ, ಜಾರಪ್ಪ ನಾಯ್ಕ, ವೀರಪ್ಪ ಪರವ, ದೇವರಾಜ್ ಸಾಲ್ಯಾನ್, ಹಾಗೂ ವೃತ್ತಿಪರ ನಿರ್ದೇಶಕರಾಗಿ ಮಾಧವ ಶೆಟ್ಟಿಗಾರ್, ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top