ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾ-2022 ಉದ್ಘಾಟನೆ ಇಂದು (ಸೆ.26) ಬೆಳಗ್ಗೆ 11.15ಕ್ಕೆ ಕೇಂದ್ರದ ಮಾಜಿ ಸಹಾಯಕ ವಿತ್ತ ಸಚಿವ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರಿಂದ ನೆರವೇರಲಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಪೂಜಾರಿಯವರ ಆಶಯದಂತೆ ವರ್ಣರಂಜಿತ ಅದ್ದೂರಿ ದಸರಾ ದರ್ಬಾರ್ ಮಂಟಪ ಸಿದ್ಧಗೊಂಡಿದ್ದು, ಅತ್ಯಾಕರ್ಷಕ ಹಾಗೂ ಅದ್ದೂರಿ ದಸರಾ ಆಚರಣೆಗೆ ಎಲ್ಲ ಸಿದ್ಧತೆಗಳು ನಡೆದಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ