ಶಿರಡಿ ಬಾಬಾ ರಂಗ ಶಿಬಿರ: 30 ದಿನಗಳ ಉಚಿತ ನಾಟಕ, ಯಕ್ಷಗಾನ ತರಬೇತಿ

Upayuktha
0



ಮಂಗಳೂರು: ಮಂಗಳೂರಿನ ಉರ್ವ ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಉಚಿತ ನಾಟಕ ಹಾಗೂ ಯಕ್ಷಗಾನ ತರಬೇತಿ ಶಿಬಿರವನ್ನು ನಡೆಸಲಾಗುವುದು ಎಂದು ಸಂಚಾಲಕಿ ಶ್ರೀಮತಿ ಲಾವಣ್ಯ ವಿಶ್ವಾಸ ಕುಮಾರ್ ದಾಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


30 ದಿನಗಳ ಶಿಬಿರದಲ್ಲಿ ತುಳು- ಕನ್ನಡ ಪೌರಾಣಿಕ ಹಾಗೂ ಚಾರಿತ್ರಿಕ ನಾಟಕ ಅಭಿನಯ ತರಬೇತಿ ನೀಡಿ ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ ನಡೆಸಲಾಗುವುದು. ಖ್ಯಾತ ನಾಟಕಗಾರ ಕದ್ರಿ ನವನೀತ ಶೆಟ್ಟಿಯವರು ನಿರ್ದೇಶನ ನೀಡಲಿರುವರು.


ಖ್ಯಾತ ಯಕ್ಷಗಾನ ವೇಷಧಾರಿ, ಕಲಾಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರ ನಿರ್ದೇಶನದಲ್ಲಿ  ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಾರಿಕೆ, ಬಣ್ಣಗಾರಿಕೆ, ಮಾತುಗಾರಿಕೆ ತರಬೇತು ನೀಡಿ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆಗೆ ಕಲಾವಿದರನ್ನು ಅಣಿಗೊಳಿಸಿ ರಂಗಪ್ರವೇಶ ಮಾಡಿಸಲಾಗುವುದು.


ಮಂಗಳೂರು ಪರಿಸರದ ಆಸಕ್ತ ನಟ ನಟಿಯರು (ವಯೋ ನಿರ್ಬಂಧ ಇಲ್ಲ) ಶಿಬಿರಾರ್ಥಿಗಳಾಗಬಹುದು.  ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ರಂಗಾಭ್ಯಾಸ ಶಿಬಿರಕ್ಕೆ ಪ್ರವೇಶ ಶುಲ್ಕ ಇರುವುದಿಲ್ಲ. 

ಹೆಚ್ಚಿನ ಮಾಹಿತಿಗೆ ಶಿರಡಿ ಸಾಯಿಬಾಬಾ ಮಂದಿರದ ಕಛೇರಿಯನ್ನು ಸಂಪರ್ಕಿಸಬಹುದು.

9483537111


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top