ಉಡುಪಿ: ಕನಕದಾಸರು ಕನ್ನಡ ನಾಡು ನುಡಿ ಸಂಸ್ಕೃತಿಯಲ್ಲಿ ಬೆರೆತು ಹೇೂಗಿರುವ ಧೀಮಂತ ವ್ಯಕ್ತಿ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿ ದಾಸ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ತೇೂರಿಸಿ ಮಹಾನ್ ಸಂತ ಸಮಾಜ ಸುಧಾರಕ ಮಾನವತೆಯ ಮೆರೆದ ಕ್ರಾಂತಿಕಾರಿ ಕವಿ. ಬದುಕಿನ ಸುಖ ಕಷ್ಟಗಳನ್ನು ತೀರ ಹತ್ತಿರದಲ್ಲಿ ಅನುಭವಿಸಿ ಅಭಿವ್ಯಕ್ತಿ ಪಡಿಸಿದ ಕೀರ್ತನಾದಾಸರು. ಅವರ ಕೃತಿಗಳಲ್ಲಿ ಜೀವನ ದರ್ಶನವಿದೆ ವಿಚಾರ ಪೂರ್ಣ ಚಿಂತನೆ ಇದೆ, ವಾಸ್ತವಿಕತೆಯ ನೇೂವಿದೆ" ಎಂದು ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.
ಕನಕದಾಸರ ಕೀತ೯ನೆಗಳಲ್ಲಿ ಒಡಲಾಳದ ಭಕ್ತಿ ಪ್ರಭಾವವಿದೆ ಆತ್ಮ ಶೇೂಧನೆ ಇದೆ. ಆತ್ಮ ವಿಶ್ವಾಸವಿದೆ. ಕನಕದಾಸರ ಹಾಡುಗಳಿಗೆ ನಮ್ಮನ್ನು ಧನಾತ್ಮಕ ಬದುಕಿನ ಕಡೆಗೆ ಸೆಳೆಯುವ ಅದ್ಭುತ ಪ್ರೇರಕ ಶಕ್ತಿ ಇದೆ. ಕನಕದಾಸರ ಸಾಹಿತ್ಯದಲ್ಲಿ ಭಕ್ತಿ ಜ್ಞಾನಗಳ ಸಮನ್ವಯತೆ ಇದೆ ಮಾತ್ರವಲ್ಲ ಸಾವ೯ಕಾಲಿಕ ಬದುಕಿನ ಸ್ಪಶ೯ತೆ ಇರುವುದರಿಂದ ಕನಕದಾಸರ ಸಾಹಿತ್ಯಕ್ಕೆ ಅಳಿವಿಲ್ಲ. ಒಟ್ಟಿನಲ್ಲಿ ಕನಕದಾಸರ ವ್ಯಕ್ತಿತ್ವವೇ ಸಮನ್ವಯ ಶೀಲವಾದದ್ದು" ಎಂದು "ಬದುಕು ಭಕುತಿ ಸಮನ್ವಯತೆ ಕನಕ ಚಿಂತನೆ' ಕುರಿತಾಗಿ ವಿಸ್ತರಣಾ ಉಪನ್ಯಾಸ ಮಾಲಿಕೆಯಲ್ಲಿ ಪ್ರೊ.ಶೆಟ್ಟಿ ಅಭಿಪ್ರಾಯಿಸಿದರು.
ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ; ರಾಷ್ಟ್ರ ಕವಿ ಗೇೂವಿಂದ ಪೈ ಸಂಶೋಧನಾ ಕೇಂದ್ರ ಮಾಹೆ ಮಣಿಪಾಲ್ ಹೈಯರ್ ಎಜುಕೇಷನ್ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕ ಇದರ ಆಶ್ರಯದಲ್ಲಿ ಹಿರಿಯಡಕ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಕನಕ ಚಿಂತನಾ ಆರನೇ ಉಪನ್ಯಾಸ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಬಾರ ಪ್ರಾಂಶುಪಾಲೆ ಶ್ರೀಮತಿ ವೀಣಾರವರು ವಹಿಸಿದ್ದರು. ಉಪ ಪ್ರಾಂಶುಪಾಲೆ ಕುಸುಮಾರವರು ಸ್ವಾಗತಿಸಿದರು.
ಕಲಾ ಶಿಕ್ಷಕ ಮೇೂಹನ ಕೆ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನಕ ಸಂಶೋಧನಾ ಅಧ್ಯಯನ ಪೀಠದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನಕ ಅಧ್ಯಯನ ಪೀಠದ ಕಾರ್ಯ ಚಟುವಟಿಕೆಗಳ ಕುರಿತಾಗಿ ಮಾಹಿತಿ ನೀಡಿದರು. ಸಂಶೋಧನಾ ಕೇಂದ್ರದ ಗ್ರಂಥಪಾಲಕ ವೆಂಕಟೇಶ್ ನಾಯ್ಕ ಕಾರ್ಯಕ್ರಮ ಸಂಯೇೂಜಿಸುವಲ್ಲಿ ಸಹಕರಿಸಿದ್ದರು. ಪ್ರಾಧ್ಯಾಪಕ ವಿಜಯಕುಮಾರ್ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಮೊದಲಿಗೆ ಕಾಲೇಜಿನ ಪ್ರಾಧ್ಯಾಪಕಿಯರಿಂದ ಕನಕದಾಸರ ಕೀತ೯ನಾ ಕಾರ್ಯಕ್ರಮ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ