ಉನ್ನತ ವ್ಯಾಸಂಗಕ್ಕೆ ಸ್ವಿಟ್ಜರ್ ಲ್ಯಾಂಡ್‍ಗೆ ತೆರಳಲಿರುವ ಸಮರ್ಥ್ ಚೂಂತಾರು

Upayuktha
0

ಮಂಗಳೂರು: ಉನ್ನತ ವ್ಯಾಸಂಗಕ್ಕಾಗಿ ಸಮರ್ಥ್ ಚೂಂತಾರು ಸೆಪ್ಟೆಂಬರ್ 11 ರಂದು ಸ್ವಿಟ್ಜರ್ ಲ್ಯಾಂಡ್‍ಗೆ ತೆರಳಲಿದ್ದಾರೆ. ಗಣಿತ ಶಾಸ್ತ್ರದಲ್ಲಿ ಉನ್ನತ ಅಧ್ಯಯನಕ್ಕಾಗಿ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಸ್ವಿಜ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ, ಜ್ಯೂರಿಕ್ ಯುನಿವರ್ಸಿಟಿಗೆ ತೆರಳಲಿದ್ದಾರೆ. ಮೆರಿಟ್ ಸೀಟು ಪಡೆದಿರುವ ಇವರು ಉಚಿತವಾಗಿ ಈ ಅರ್ಹತೆ ಪಡೆದಿದ್ದಾರೆ.


ಎರಡು ವರ್ಷಗಳ ಕೋರ್ಸ್ ಇದಾಗಿದ್ದು ಭಾರತದಿಂದ ಆಯ್ಕೆಯಾದ ಬೆರಳೆಣಿಕೆಯ ವಿದ್ಯಾರ್ಥಿಗಳಲ್ಲಿ ಸಮರ್ಥ್ ಚೂಂತಾರು ಸೇರಿರುತ್ತಾರೆ. ದಂತ ವೈದ್ಯ ಡಾ|| ಮುರಲೀ ಮೋಹನ್ ಚೂಂತಾರು ಹಾಗೂ ಶ್ರೀಮತಿ ಡಾ|| ರಾಜಶ್ರೀ ಮೋಹನ್ ರವರ ಪುತ್ರರಾಗಿದ್ದು ಬೆಂಗಳೂರಿನ ಭಾರತೀಯ ಸಾಂಖ್ಯಿಕ ವಿದ್ಯಾಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣವನ್ನು ಶಾರದಾ ವಿದ್ಯಾಲಯದಲ್ಲಿ ಕಲಿತ ಬಳಿಕ ಲೂರ್ಡ್ಸ್‌ ಸೆಂಟ್ರಲ್ ಸ್ಕೂಲ್ ಮತ್ತು CFAL ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿರುತ್ತಾರೆ.


web counter

إرسال تعليق

0 تعليقات
إرسال تعليق (0)
To Top