ಎಡನೀರು ಮಠದಲ್ಲಿ ಡಾ. ರಮಾನಂದ ಬನಾರಿಯವರ 'ರೋಗ ನಿದಾನ ಸರಳ ವಿಧಾನ ' ಕೃತಿ ಬಿಡುಗಡೆ

Upayuktha
0

ಕಾಸರಗೋಡು: ಕುಟುಂಬ ವೈದ್ಯರಾಗಿ ಜನರ ಸ್ವಾಸ್ತ್ಯ ಕಾಪಾಡಿರುವುದಲ್ಲದೆ, ಕವಿಯಾಗಿ ಸಾಹಿತ್ಯ ಕೃತಿಗೆ ಮೂಲಕ ಜನರ ಮನಸ್ಸಿನ ಸ್ವಾಸ್ತ್ಯವನ್ನು ಸಂರಕ್ಷಿಸಿಕೊಂಡು ಬರುತ್ತಿರುವ ಡಾ.ಬನಾರಿಯವರು “ರೋಗನಿಧಾನ ಸರಳ ಎಧಾನ' ಎಂಬ ಉತ್ತಮವಾದ ಶೀರ್ಷಿಕೆಯೊಂದಿಗೆ ಪುಸ್ತಕವನ್ನು ಹೂರತಂದಿದ್ದಾರೆ. ತನ್ನೂಲಕ ಕನ್ನಡದ ಅಸ್ಥಿತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ.

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ:

ಮತ್ತು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ದೇಲಂಪಾಡಿ ಇವುಗಳ ಜಂಟಿ ಆಶ್ರಯದಲ್ಲಿ ಚಾತುರ್ಮಾಸ್ಯ ಸಮಿಕಿಯ ಸಹಕಾರದೊಂದಿಗೆ ಎಡನೀರು ಮಠದ ಚಾತುರ್ಮಾಸ್ಯ ವೇದಿಕೆಯಲ್ಲಿ ಗುರುವಾರ ಜರಗಿದ ಡಾ.ರಮಾನಂದ ಬನಾರಿ “ರೋಗ ನಿಧಾನ ಸರಳ ವಿಧಾನ" ಎಂಬ ಕೃತಿ ಜಿಡುಗಡೆ ಸಮಾರಂಧದಲ್ಲಿ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ಕನ್ನಡಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ:

'ಕಾಸರಗೋಡಿನಲ್ಲಿ ಯಾವಾಗಲೂ ಕನ್ನಸಿಗರು ಸಮಸ್ಯೆಯೊಂದಿಗೆ ಬದುಕುವಂತಾಗಿದ್ದು ಪ್ರತಿದಿನವೂ ಕನ್ನಡಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ:

ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೊದಲ ಕೃತಿಯನ್ನು ಪಡೆದುಕೊಂಡು ಮಾತನಾಡಿ, 82 ವರ್ಷಗಳ ಕಾಲ ತಮ್ಮ ಬದುಕನ್ನು ಸವೆಸಿ ಸುದೀರ್ಫವಾದ ಸೇವೆಯನ್ನು ನೀಡಿ ಸಮಾಜದ ಓರೆಕೋರೆಗಳನ್ನು ಸರಿಪಡಿಸಿ ಬೆಳಕು ಚೆಲ್ಲುವ ಕೆಲಸವನ್ನು ಡಾ.ಬನಾರಿಯವರು ಮುಡಿದ್ದಾರೆ. ಸಾಹಿತಿಗಳು ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಪುಸ್ತಕ ಬರೆದಿದ್ದಾರೆ. ಜೊತೆಗೆ ಹೋರಾಟ ಮತ್ತು ಕೃತಿಗಳ ಮೂಲಕ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಅವರು ಹೇಳಿದರು.


ಕಾಸರಗೋಡಿನ ಹಿರಿಯ ವೈದ್ಯ ಡಾ.ಜಿ.ಎಸ್‌. ರಾವ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಪಿ. ಭಟ್‌ ಪುತ್ತೂರು ಕೃತಿ ಪರಿಚಯ ಮಾಡಿದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಆಶ್ರಫ್‌ ಶುಭಾಶಂಸನೆಗೈದು ಬನಾರಿಯವರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಹಿರಿಯ ಕುಟುಂಬ ವೈದ್ಯ ಡಾ.ಜಿ.ಕೆ. ಭಟ್‌ ಸಂಕಬಿತ್ತಿಲು, ಕಾಸರಗೋಡು ಐಎಂಎ ಅಧ್ಯಕ್ಷ ಡಾ.ನಾರಾಯಣ ನಾಯ್ಕ್‌ ಪ್ರಸ್ತಾವನೆಗೈದರು. ಎಡನೀರು ಮಠದ ಆಡಳಿತ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ರಾಮಣ್ಣ ಮಾಸ್ತರ್‌ ವಂದಿಸಿದರು. ಡಾ. ರಾಧಾಕೃಷ್ಣ ಬೆಳ್ಳೂರು, ವಿಶಾಲಾಕ್ಷ ಪುತ್ರಕಳ, ಚಂದ್ರಶೇಖರ ಏತಡ್ಡ ನಿರೂಪಿಸಿದರು. ಡಾ.ಅನ್ನಪೂರ್ಣ ಏತಡ್ಕ ಬಳಗದವರು ಪ್ರಾರ್ಥನೆ ಹಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top