ಗಮಕಿ ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್ಟರ 'ಪುರಾಣ ಪ್ರಪಂಚ' ಕೃತಿ ಬಿಡುಗಡೆ

Upayuktha
0

ಬೆಂಗಳೂರು: ಕರ್ನಾಟಕ ಕಲಾಶ್ರೀ ಗಮಕಿ ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್ಟರ 14ನೇ ಕೃತಿ ಪುರಾಣ ಪ್ರಪಂಚ (ಭಾಗ-1)- ಮಹಾ ಪುರಾಣಗಳು ಇಂದು ಕನ್ನಡ ಸಾಹಿತ್ಯ ಪರಿಷತ್‌ ಸಭಾ ಭವನದಲ್ಲಿ ಲೋಕಾರ್ಪಣೆಗೊಂಡಿತು.


ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್‌ ಜೋಶಿ ಅವರು ಕೃತಿ ಬಿಡುಗಡೆ ಮಾಡಿದರು. ಹಿರಿಯ ವ್ಯಾಖ್ಯಾನಕಾರರು ಮತ್ತು ಲೇಖಕರಾದ ಡಾ. ಎ.ವಿ. ಪ್ರಸನ್ನ (ನಿವೃತ್ತ ಕೆ.ಎ.ಎಸ್ ಅಧಿಕಾರಿ) ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚಿಂತಕರು ಹಾಗೂ ಲೇಖಕರಾದ ವಿದ್ವಾನ್‌ ಜಗದೀಶ್ ಶರ್ಮಾ, ಸಂಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.


ಸಮಾರಂಭದಲ್ಲಿ- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ  ಡಾ. ಬಿ.ವಿ ವಸಂತ ಕುಮಾರ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾದ ಡಾ. ಜಿ.ಎಲ್‌ ಹೆಗಡೆ, ಬೆಂಗಳೂರಿನ ಕನಕ ಅಧ್ಯಯನ ಪೀಠದ ಸಮನ್ವಯಾಧಿಕಾರಿ ಡಾ. ಎಂ.ಆರ್‌ ಸತ್ಯನಾರಾಯಣ, ಖ್ಯಾತ ಆಯುರ್ವೇದ ತಜ್ಞರು ಹಾಗೂ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರಾದ ಡಾ. ಗಿರಿಧರ ಕಜೆ, ಕರ್ನಾಟಕ ಗಮಕ ಕಲಾ ಪರಿಷತ್‌ ಅಧ್ಯಕ್ಷೆ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಕರ್ನಾಟಕ ಸರಕಾರದ ಹಿರಿಯ ಅಧಿಕಾರಿ ಬೆಳ್ಳಿಬಟ್ಟಲು ರಾಮಚಂದ್ರರಾವ್‌, ಸೆಲ್ಕೋ ಸೋಲಾರ್‌ನ ಮುಖ್ಯ ಆಡಳಿತಾಧಿಕಾರಿ ಮೋಹನ ಭಾಸ್ಕರ ಹೆಗಡೆ ಹೆರವಟ್ಟಾ, ಹಿರಿಯ ನ್ಯಾಯವಾದಿ ವೈ.ಕೆ ನಾರಾಯಣ ಶರ್ಮ, ಸಾಹಿತಿ ಡಾ. ಬ.ಲ ಸುರೇಶ್‌ ಮುಂತಾದವರು ಗೌರವ ಉಪಸ್ಥಿತರಿದ್ದರು.

ಕೃತಿಯನ್ನು ಶ್ರೀಸರಸ್ವತೀ ಪ್ರಕಾಶನ ವತಿಯಿಂದ ಪ್ರಕಟಿಸಲಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top