ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಇದರ ಉಪನ್ಯಾಸಕರಿಂದ ವಿಜ್ಞಾನ ಹಾಗೂ ತಂತ್ರಜ್ಞಾನದ ಒಳಿತು ಮತ್ತು ಕೆಡುಕಿನ ಪರಿಣಾಮಗಳ ಬಗ್ಗೆ ಚಾವಡಿ ಚರ್ಚೆ ನಡೆಯಿತು. ಪ್ರಾಚಾರ್ಯ ಪ್ರೊ.ಎನ್.ದಿನೇಶ್ ಚೌಟ ಹಾಗೂ ಉಪ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಅವರು ಶುಭ ಹಾರೈಸಿದರು.
ವಿಜ್ಞಾನ ತಂತ್ರಜ್ಞಾನಗಳ ಪೂರಕ ಪರಿಣಾಮಗಳ ಬಗ್ಗೆ ಉಪನ್ಯಾಸಕರಾದ ಸುನೀಲ್ ಪಿ.ಜೆ, ಸುಭಾಷ್ ರಾವ್ ಬೋಳೂರು, ಪದ್ಮಶ್ರೀ, ದಿವ್ಯಾ ಕುಮಾರಿ ಇವರು ಪರವಾಗಿ ವಾದ ಮಂಡಿಸಿದರು.
ಕೆಡುಕು ಪರಿಣಾಮಗಳ ಬಗ್ಗೆ ದೀಕ್ಷಿತ್ ರೈ, ವೈದೇಹಿ, ಸ್ಮಿತಾ ಬೆಡೇಕರ್, ಡಾ.ಪ್ರಸನ್ನ ಕುಮಾರ ಐತಾಳ್ ಇವರು ಪ್ರತಿವಾದ ಮಂಡಿಸಿದರು. ಸಮನ್ವಯಕಾರರಾಗಿ ಮಹಾವೀರ ಜೈನ್ ನಿರ್ವಹಿಸಿದರು. ಕಾಲೇಜಿನ ಉಪನ್ಯಾಸಕರು, ಅಹ್ವಾನಿತರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ