ತೆಂಕನಿಡಿಯೂರು ಕಾಲೇಜು: ಪ್ರಥಮ ವರ್ಷದ ಬಿ.ಎ., ಬಿ.ಎಸ್.ಡಬ್ಲ್ಯೂ. ಹಾಗೂ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್‌ ಕಾರ್ಯಕ್ರಮ

Upayuktha
0




ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿ ಪ್ರಥಮ ಬಿ.ಎ., ಬಿ.ಎಸ್.ಡಬ್ಲ್ಯೂ. ಹಾಗೂ ಬಿ.ಎಸ್ಸಿ.ಗೆ ಪ್ರವೇಶಾತಿ ಪಡೆದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಕಾಲೇಜಿನಲ್ಲಿ ದೊರಕುವ ಸೌಲಭ್ಯಗಳು ಹಾಗೂ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಶೈಕ್ಷಣಿಕ ಉನ್ನತಿಯ ಮಾರ್ಗಸೂಚಿಗಳನ್ನು ವಿವರಿಸಿದರು.


ಅರ್ಥಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕ ಶ್ರೀ ಶ್ರೀನಿವಾಸ ಶೆಟ್ಟಿ, ಹಿಂದಿ ವಿಭಾಗ  ಮುಖ್ಯಸ್ಥೆ ಡಾ. ಆಶಾ ಸಿ. ಇಂಗಳಗಿ ಪದವಿ ಶಿಕ್ಷಣದಲ್ಲಿರಬೇಕಾದ ಶಿಸ್ತು, ಸಂಯಮ ಹಾಗೂ ಕಠಿಣ ಪರಿಶ್ರಮ ಹಾಜರಾತಿ ಕುರಿತಾಗಿ ತಿಳಿಸಿದರು.


ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಶ್ರೀ ರವಿರಾಜ ಎಸ್. ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ದೊರಕುವ ಹಾಗೂ ಸರಕಾರದ ವಿದ್ಯಾರ್ಥಿ ವೇತನದ ವಿವರಗಳ ಜೊತೆಗೆ ನೂತನ ಶಿಕ್ಷಣ ನೀತಿಯ ಕುರಿತಾಗಿ ವಿವರಿಸಿದರೆ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಶ್ರೀಮತಿ ಸುಷ್ಮಾ ಟಿ. ಹಾಗೂ ಡಾ. ಮಹೇಶ್ ಕುಮಾರ್ ಕೆ.ಇ. ಎನ್.ಎಸ್.ಎಸ್. ರೋವರ್ಸ್-ರೇಂಜರ್ಸ್, ರೆಡ್‍ಕ್ರಾಸ್, ಸಾಂಸ್ಕøತಿಕ ಸಂಘ ಇತ್ಯಾದಿ ಸಹಪಠ್ಯ ಚಟುವಟಿಕೆಗಳ ಕುರಿತಾಗಿ ವಿವರಿಸಿದರು.


ಉದ್ಯೋಗ ಮಾಹಿತಿ ಘಟಕ ಸಂಚಾಲಕ ಶ್ರೀ ಉಮೇಶ್ ಪೈ ಉದ್ಯೋಗಾವಕಾಶಗಳನ್ನು ಪಡೆಯುವ ಅವಶ್ಯಕ ಕೌಶಲಗಳ ಬಗ್ಗೆ ವಿವರಿಸಿದರೆ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ್ ಎನ್. ಪದವಿ ಶಿಕ್ಷಣದ ಜೊತೆ ವಿದ್ಯಾರ್ಥಿಗಳಿಗೆ ಅವಶ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ತಯಾರಿಯ ಸೂಕ್ಷ್ಮತೆಗಳನ್ನು ವಿವರಿಸಿದರು.  ವಿದ್ಯಾರ್ಥಿಗಳ ನಡವಳಿಕೆಗಳ ಕುರಿತಾಗಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ರಾಧಾಕೃಷ್ಣ ವಿವರಿಸಿದರು.  ಡಾ. ಮಮತಾ ಎ.ಎಲ್., ವಿಜ್ಞಾನದ ಐಚ್ಚಿಕ ವಿಷಯಗಳ ಅಧ್ಯಯನ ಕುರಿತಾಗಿ ವಿವರಿಸಿದರೆ, ಕನ್ನಡ ಸಹಪ್ರಾಧ್ಯಾಪಕ ಡಾ. ವೆಂಕಟೇಶ ಹೆಚ್.ಕೆ. ಸ್ವಾಗತಿಸಿದರೆ, ಡಾ. ಮಮತಾ ಎ.ಎಲ್. ವಂದಿಸಿದರು.  ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ಅಶೋಕ್ ನಿರೂಪಿಸಿದರು. ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ, ಗ್ರಂಥಪಾಲಕರಾದ ಶ್ರೀ ಕೃಷ್ಣ, ಬೋಧಕ/ಬೋಧಕೇತರರು ಉಪಸ್ಥಿತರಿದ್ದರು.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top