ಮಂಗಳೂರಿನಲ್ಲಿ ಓಯಸಿಸ್ ಫರ್ಟಿಲಿಟಿ ಸೆಂಟರ್ ನ 3ನೆ ಕೇಂದ್ರ ನಾಳೆ (ಸೆ.9) ಉದ್ಘಾಟನೆ

Upayuktha
0

ಮಂಗಳೂರು: ನಗರದ ಎ. ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿರುವ ಸಿ.ವಿಂಗ್ ನ ಪ್ರಥಮ ಮಹಡಿಯಲ್ಲಿ 9ನೇ ತಾರೀಕು ಸೆಪ್ಟೆಂಬರ 2022ರ ಶುಕ್ರವಾರದಂದು ಉದ್ಘಾಟನೆ ಗೊಳ್ಳಲಿದೆ.


ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಎ.ಜೆ. ಶೆಟ್ಟಿ, ಸಂಸ್ಥಾಪಕ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಡಾ. ಪ್ರಶಾಂತ್ ಮಾರ್ಲ ಕೆ.ವೈದ್ಯಕೀಯ ನಿರ್ದೇಶಕ -ಡಾ.ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಡಾ. ಅಮೃತಾ ಪಿ. ಮಾರ್ಲ, ನಿರ್ದೇಶಕ ವೈದ್ಯಕೀಯ ಆಡಳಿತ - ಡಾ.ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಓಯಸಿಸ್ ಫರ್ಟಿಲಿಟಿ ಸಂಸ್ಥೆಯ ಡಾ. ದುರ್ಗಾ ಜಿ. ರಾವ್ - ಸಹ-ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕ, ಡಾ. ಕೃಷ್ಣ ಚೈತನ್ಯ ಎಂ.. ವೈಜ್ಞಾನಿಕ ಮುಖ್ಯಸ್ಥ ಮತ್ತು ಕ್ಲಿನಿಕಲ್ ಭ್ರೂಣಶಾಸ್ತ್ರಜ್ಞ, ಡಾ. ಪ್ರಮೋದ ಲಕ್ಷ್ಮಣ್- ಕ್ಲಿನಿಕಲ್ ಹೆಡ್ ಮತ್ತು ಫರ್ಟಿಲಿಟಿ ಸ್ಪೆಷಲಿಸ್ಟ್, ಸುಧಾಕರ್ ಜಾಧವ್ - ಸಿಒಒ, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಓಯಸಿಸ್ ಫರ್ಟಿಲಿಟಿ ಬಗ್ಗೆ:

ಓಯಸಿಸ್ ಫರ್ಟಿಲಿಟಿ ಸಂಸ್ಥೆ, ಸದ್ಗುರು ಹೆಲ್ತ್‌ಕೇರ್ ಸರ್ವಿಸಸ್ ಪ್ರೈ.ಲಿಮಿಟೆಡ್ ಸಂಸ್ಥೆಯ ಅಂಗ ಸಂಸ್ಥೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಭಾರತದಲ್ಲಿ ಸಂತಾನೋತ್ಪತ್ತಿ ಮತ್ತು ಫಲವತ್ತತೆಯ ಚಿಕಿತ್ಸೆಯಲ್ಲಿ ಪೋಷಕರಿಗೆ ಒಂದೇ ಸೂರಿನಡಿ ಚಿಕತ್ಸೆ ನೀಡುವ ನಿಟ್ಟಿನಲ್ಲಿ ಡೇ-ಕೇರ್ ಕ್ಲಿನಿಕ್ ನಲ್ಲಿ ತೆರೆದಿದ್ದು ಇಲ್ಲಿ ಪೋಷಕರಿಗೆ ಏಕ ಕಾಲದಲ್ಲಿ ಪ್ರಮುಖವಾಗಿ ವೈದ್ಯಕೀಯ ಸಮಾಲೋಚನೆ, ಪರೀಕ್ಷೆ, ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ.


2009 ರಲ್ಲಿ ಪ್ರಾರಂಭವಾದ ಓಯಸಿಸ್ ಫರ್ಟಿಲಿಟಿ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದ ಅನುಭವವನ್ನು ಹೊಂದಿರುವ ಬಂಜೆತನ ನಿವಾರಣಾ ತಜ್ಞರ ತಂಡದಿಂದ ನಡೆಸಲ್ಪಡುತ್ತಿದೆ.ಜೊತೆಗೆ ಉನ್ನತ ಗುಣಮಟ್ಟದ ಸೇವೆ ಮತ್ತು ಹೆಚ್ಚಿನ ಯಶಸ್ಸಿನಿಂದ ಅತ್ಯುತ್ತಮ ಈಗಾಗಲೇ ದೇಶದಾದ್ಯಂತ ಮನ್ನಣೆ ಗಳಿಸಿದೆ.

ಇಂದು ಈ ಸಂಸ್ಥೆ ದೇಶದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಜಾರ್ಖಂಡ್, ಗುಜರಾತ್, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳಲ್ಲಿ 25 ಶಾಖೆ ಗಳನ್ನು ಹೊಂದಿದೆ ಎಂದು ಡಾ. ದುರ್ಗಾ ಜಿ ರಾವ್, ಎಂಡಿ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 

RSVP: ಶೇಷಗಿರಿ: 

+91 98441 72777

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top