ಉಜಿರೆ: ಮರ ಕಡಿಯುವುದರಿಂದ ಭೂಮಿಯ ಮೇಲೆ ಹಲವು ರೀತಿಯ ದುಷ್ಪರಿಣಾಮಗಳು ಆಗುತ್ತಿದ್ದು ನಮಗದು ಅರ್ಥವಾಗುತ್ತಿಲ್ಲ, ಹೀಗೆಯೇ ನಾವು ಮುಂದುವರೆದರೆ ಹಲವಾರು ತೊಂದರೆಗಳಿಗೆ ಬಲಿ ಆಗುವ ಪರಿಸ್ಥಿತಿ ಬರಬಹುದು ಎಂದು ಎಸ್.ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ಕನ್ಸಲ್ಟೆನ್ಸಿ ಹಾಗೂ ಹಾಸ್ಟೆಲ್ ಅಡ್ಮಿನಿಸ್ಟ್ರೇಷನ್ ಸಿ.ಇ.ಓ, ಆಗಿರುವ ಪೂರನ್ ವರ್ಮಾ ಹೇಳಿದರು.
ದಿನಾಚರಣೆಯ ಅಂಗವಾಗಿ ಹಸಿರು ಸೇನೆಯ ಸಹ ಭಾಗಿತ್ವದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ 50ನೇ ವರ್ಷದ ಸವಿನೆನಪಿಗಾಗಿ 50 ಗಿಡಗಳನ್ನು ನೆಡುವ ಸುವರ್ಣ ನೆಡುತೋಪು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸ್ನಾತಕೋತ್ತರ ಕೇಂದ್ರದ ಡೀನ್ ಆಗಿರುವ ಡಾ. ವಿಶ್ವನಾಥ್ ಪಿ ಮಾತನಾಡಿ ನಮ್ಮ ದೇಶದಲ್ಲಿ ಪರಿಸರ ನಾಶ ಆಗುತ್ತಿದ್ದು, ಪರಿಸರವನ್ನು ಉಳಿಸುವ ಸಲುವಾಗಿ ಸುವರ್ಣ ವನವನ್ನು ನಿರ್ಮಿಸಲು ನಾವೆಲ್ಲರೂ ಹೊರಟಿದ್ದೇವೆ, ಇಂತಹ ಕಾರ್ಯಕ್ರಮಗಳು ರಾಷ್ಟ್ರ ಮಟ್ಟದಲ್ಲೂ ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿದರು.
ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ ಕೆ. ಎಸ್, ಶ್ರೀಮತಿ ದೀಪ ಆರ್. ಪಿ, ಹಾಗೂ ಹಸಿರು ಸೇನೆಯ ಯೋಜನಾಧಿಕಾರಿಗಳಾದ ಶ್ರೀ. ಪ್ರಸನ್ನ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎನ್ಎಸ್ಎಸ್ ನ ಸ್ವಯಂ ಸೇವಕಿ ಪ್ರಿನ್ಸಿಯ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಎನ್ಎಸ್ಎಸ್ ಸ್ವಯಂ ಸೇವಕರು ಹಾಗೂ ಹಸಿರು ಸೇನೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ